ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ 2016ರ ಆವೃತ್ತಿಯಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಷ್ಠ ಸಾಧನೆಯನ್ನೇ ಮಾಡಿದ್ದಾರೆ. ಐಪಿಎಲ್ನ ಈ ಒಂದೇ ಸೀಸನ್ನಲ್ಲಿ ರನ್ ಮಷಿನ್ ಕೊಹ್ಲಿ 973 ರನ್ಗಳನ್ನು ಸಿಡಿಸಿದ್ದಾರೆ. ನಾಲ್ಕು ಶತಕಗಳನ್ನು ಬಾರಿಸಿದ ವಿರಾಟ್ ಕೊಹ್ಲಿ ಇದೇ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಫೈನಲ್ವರೆಗೆ ಕೊಂಡೊಯ್ದಿದ್ದರು.
2. 2013ರ ಆವೃತ್ತಿಯಲ್ಲಿ ಗೇಲ್ 175 ರನ್ ನಾಟ್ಔಟ್
2013ರ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ಬೌಲರ್ಗಳ ಪಾಲಿಗೆ ದುಃಸ್ವಪ್ನದಂತೆ ವರ್ತಿಸಿದ್ದ ಕ್ರಿಸ್ ಗೇಲ್ ಒಂದೇ ಮ್ಯಾಚ್ನಲ್ಲಿ 175 ರನ್ ಸಿಡಿಸಿ ನಾಟ್ ಔಟ್ ಆಗಿ ಉಳಿದಿದ್ದರು. ಆರ್ಸಿಬಿ ತಂಡದ ಮಾಜಿ ಆರಂಭಿಕ ಆಟಗಾರ ಗೇಲ್ ಐಪಿಎಲ್ ಟಿ 20 ಒಂದು ಪಂದ್ಯದಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅಂದಹಾಗೆ ಅವರು 66 ಬಾಲ್ ಗಳಲ್ಲಿ 175 ರನ್ ಸಿಡಿಸಿದ್ದರು.
3. ಯುವರಾಜ್ ಸಿಂಗ್ ಅವಳಿ ಹ್ಯಾಟ್ರಿಕ್ ಸಾಧನೆ
ಲೆಜೆಂಡರಿ ಆಲ್ರೌಂಡರ್ ಯುವರಾಜ್ ಸಿಂಗ್ 2007ರ ವಿಶ್ವಕಪ್ನಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅದೇ ರೀತಿ ಐಪಿಎಲ್ನಲ್ಲೂ ಒಂದೇ ಆವೃತ್ತಿಯಲ್ಲಿ ಅವಳಿ ಹ್ಯಾಟ್ರಿಕ್ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2009ರ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಆರ್ಸಿಬಿ ಹಾಗೂ ಡೆಕ್ಕನ್ ಚಾರ್ಜಸ್ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.