alex Certify ಸದ್ಯದಲ್ಲೇ ಬಿಡುಗಡೆಯಾಗಲಿರುವ ಐ ಫೋನ್​ 13 ನಲ್ಲಿ ಇರಲಿದೆಯಾ ಈ ವ್ಯವಸ್ಥೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ಯದಲ್ಲೇ ಬಿಡುಗಡೆಯಾಗಲಿರುವ ಐ ಫೋನ್​ 13 ನಲ್ಲಿ ಇರಲಿದೆಯಾ ಈ ವ್ಯವಸ್ಥೆ…?

ಆ್ಯಪಲ್​ ಕಂಪನಿಯ ಹೊಸ ಫೋನ್​ ಐ ಫೋನ್​ 13 ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ ಎಂದು ಹೇಳಲಾಗ್ತಿದೆ.

ಹಲವು ನಿರೀಕ್ಷೆಗಳನ್ನು ಹೊತ್ತು ತರುತ್ತಿರುವ ಈ ಮೊಬೈಲ್​​ನಲ್ಲಿ 120 ಹರ್ಟ್ಸ್​​ ಪ್ರೋ ಮೋಷನ್ ಪರದೆ, ಅತ್ಯುತ್ತಮ ಗುಣಮಟ್ಟದ ಕ್ಯಾಮರಾ, ಎ 15 ಬಯಾನಿಕ್​ ಪ್ರೊಸೆಸರ್​ ಜೊತೆಯಲ್ಲಿ ಮಾಸ್ಕ್​ ಧರಿಸುತ್ತಿರುವ ವಿಶ್ವಕ್ಕೆ ಹೊಂದಿಕೆಯಾಗುವಂತಹ ಸೌಲಭ್ಯಗಳನ್ನೂ ಹೊಂದಿರಲಿದೆ ಎಂದು ಹೇಳಲಾಗಿದೆ.

ಅಂದರೆ ಮಾಸ್ಕ್​ ಧರಿಸಿಯೂ ಫೇಸ್​ ಐಡಿಯನ್ನು ಬಳಕೆ ಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.

ಜಾನ್​ ಪ್ರೋಸರ್ಸ್​ ಫ್ರಂಟ್​ ಪೇಜ್​ ಟೆಕ್​​ ನೀಡಿರುವ ಆಂತರಿಕ ಮಾಹಿತಿಯ ಪ್ರಕಾರ ಐ ಫೋನ್​ 13 ಸುಧಾರಿತ ಫೇಸ್​ ಐಡಿ ವ್ಯವಸ್ಥೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಸುಧಾರಿತ ಫೇಸ್​ ಐಡಿ ಮೂಲಕ ಮಾಸ್ಕ್​ ಅಥವಾ ಕನ್ನಡಕ ಧರಿಸಿಯೂ ಫೇಸ್ ಐಡಿ ಮೂಲಕ ಮೊಬೈಲ್​ ಫೋನ್​ ಅನ್​ಲಾಕ್​ ಮಾಡಬಹುದಾಗಿದೆ.

ಐಫೋನ್​ ಪ್ರೈವೆಸಿಯ ಅಡಿಯಲ್ಲಿ ಬರುವ ಫೇಸ್ ಐಡಿಯು ಅತ್ಯಂತ ಸುರಕ್ಷಿತ ಲಾಕಿಂಗ್​ ವಿಧಾನವಾಗಿದೆ. ಆದರೆ ಮಾಸ್ಕ್ ಕಾರಣದಿಂದಾಗಿ ಫೇಸ್ ಲಾಕ್​ ಬಳಕೆ ಮಾಡುವುದು ಕೊಂಚ ಕಷ್ಟವಾಗುತ್ತಿದೆ. ಹೀಗಾಗಿ ಐಫೋನ್​ 13 ಈ ಸುಧಾರಿತ ವೈಶಿಷ್ಟ್ಯ ಹೊಂದಿರಲಿದೆ ಎಂಬ ಸುದ್ದಿಯೋ ಐ ಫೋನ್​ ಪ್ರಿಯರ ಕಣ್ಣರಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...