alex Certify ಆಪಲ್​ ʼಫೇಸ್​ ಐಡಿʼ ಸೌಲಭ್ಯದ ಪ್ರಮಾದ ಬಯಲು ಮಾಡಿದ ಸಹೋದರರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್​ ʼಫೇಸ್​ ಐಡಿʼ ಸೌಲಭ್ಯದ ಪ್ರಮಾದ ಬಯಲು ಮಾಡಿದ ಸಹೋದರರು..!

ಐ ಫೋನ್​ಗಳ ದರ ದುಬಾರಿಯಾಗಿದ್ದರೂ ಸಹ ತಮ್ಮ ಅತ್ಯಾಧುನಿಕ ಸೌಲಭ್ಯಗಳ ಮೂಲಕ ಗ್ರಾಹಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತೆ. ಅದರಲ್ಲೂ ಆಪಲ್​ನ ಫೇಸ್​ ಐಡಿ ಆಯ್ಕೆ ಅತ್ಯಂತ ಜನಪ್ರಿಯ ಸೌಲಭ್ಯಗಳಲ್ಲಿ ಒಂದು.

ಈ ಫೇಸ್ ಐಡಿ ಆಯ್ಕೆಯನ್ನ 2017ರಲ್ಲಿ ಮೊಟ್ಟ ಮೊದಲ ಬಾರಿಗೆ ಆಪಲ್​ ಎಕ್ಸ್​ ಮೊಬೈಲ್​ನಲ್ಲಿ ಪರಿಚಯಿಸಲಾಯ್ತು. ಆಪಲ್​ನ ಈ ಫೇಸ್​ ಐಡಿ ಜನಪ್ರಿಯತೆಗೆ ಜೊತೆಗೆ ಎಷ್ಟೋ ಬಾರಿ ಅನೇಕ ದೂರುಗಳನ್ನೂ ಸ್ವೀಕರಿಸಿದೆ. ಇದೀಗ ಫೇಸ್​ಬುಕ್​ನಲ್ಲಿ ಫೇಸ್​ ಐಡಿ ಸುರಕ್ಷತೆಯನ್ನ ಪ್ರಶ್ನೆ ಮಾಡುವಂತಹ ಇನ್ನೊಂದು ವಿಡಿಯೋ ವೈರಲ್​ ಆಗಿದೆ.

ವಿನಮ್ರೆ ಸೂದ್​ ಎಂಬ ಹೆಸರಿನ ವ್ಯಕ್ತಿ ಹೊಸದಾಗಿ ಖರೀದಿ ಮಾಡಿದ ಐ ಫೋನ್​ 12 ಮಿನಿ ಮೊಬೈಲ್​ನ್ನು ಫೇಸ್​ ಐಡಿ ಬಳಸಿ ಅನ್​ಲಾಕ್​ ಮಾಡಿದ್ದಾರೆ. ಬಳಿಕ ಈ ಮೊಬೈಲ್​ನ್ನು ತಮ್ಮ ಸಹೋದರ ಉಪಾಂಶುಗೆ ನೀಡಿದ್ದಾರೆ.

ವಿಚಿತ್ರ ಅಂದ್ರೆ ಉಪಾಂಶು ಮುಖವನ್ನ ಮೊಬೈಲ್​ ಮುಂದೆ ಹಿಡಿದರೂ ಸಹ ಮೊಬೈಲ್​ ಅನ್​ಲಾಕ್​ ಆಗಿದೆ. ಅಂದಹಾಗೆ ಇವರಿಬ್ಬರೂ ಅವಳಿ ಜವಳಿ ಅಲ್ಲ, ತದ್ರೂಪಿಯೂ ಅಲ್ಲ. ಆದರೂ ಸಹ ಇವರ ಮುಖವನ್ನ ಗುರುತಿಸುವಲ್ಲಿ ಐ ಫೋನ್​ ವಿಫಲವಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Folks, Check this out. Uncovered major FLAW in Apple FaceID recognition software. This is the case with reputed company in mobile industry selling over expensive phones in the name of "security" / "end to end control", etc in their Marketing campaigns..where the end product is less secure than a cheap 6000 Rs android phone. Shame on you apple. Let's spread this video so this reaches out Apple Inc. / Apple India for them to action this ASAP. #apple #faceid #applesoftwareflaw #Unscripted #video #Proof #iphone #iPhone12mini

Posted by Vinamre Sood on Friday, June 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...