alex Certify iOS ಗೆ ಹೊಂದಿಕೆಯಾಗುವ ಹೋಂಡಾ HNess ಆಗಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

iOS ಗೆ ಹೊಂದಿಕೆಯಾಗುವ ಹೋಂಡಾ HNess ಆಗಮನ

ಆಂಡ್ರಾಯ್ಡ್‌ ಆಟೋ ನಂತರ, ಹೋಂಡಾ ಟೂ ವೀಲ್ಹರ್ಸ್‌ ಇಂಡಿಯಾ ಈಗ iOS ಗೆ ಹೊಂದಿಕೆಯಾಗುವಂತಹ ಎಚ್‌ನೆಸ್‌ ಸಿಬಿ350 (HNess CB350) ಮೋಟಾರ್‌ ಸೈಕಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದಕ್ಕಾಗಿ HNess CB350ನಲ್ಲಿ ಹೋಂಡಾ ಸ್ಮಾರ್ಟ್‌ ಫೋನ್‌ ವಾಯ್ಸ್‌ ಕಮಾಂಡ್‌ ಸಿಸ್ಟಮ್‌ ಅನ್ನು ಅಳವಡಿಸಿದೆ. ಅಲ್ಲದೆ, ಇದನ್ನು iOSಗೆ ಜೋಡಿಸಿದೆ.

ಸ್ಮಾರ್ಟ್‌ಫೋನ್‌ ವಾಯ್ಸ್‌ ಕಮಾಂಡ್‌ ಸಿಸ್ಟಮ್‌ ಈ ಹಿಂದೆ ಆಂಡ್ರಾಯ್ಟ್‌ ಆಟೋ ಸಿಸ್ಟಮ್‌ನಲ್ಲಿ ಮಾತ್ರ ಲಭ್ಯವಿತ್ತು. ಕಂಪನಿಯ ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಮಾಂಡ್ ಸಿಸ್ಟಮ್ ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಕರೆಗಳನ್ನು ಸ್ವೀಕರಿಸಲು ಮತ್ತು ಮಾಡಲು ಅವಕಾಶವಿದೆ. ಅದೇ ರೀತಿ ಸಂದೇಶಗಳು ಮತ್ತು ನ್ಯಾವಿಗೇಷನ್ ಮಾಹಿತಿಯನ್ನು ತೋರಿಸುತ್ತದೆ.

ಆದಾಗ್ಯೂ, ಈ ವೈಶಿಷ್ಟ್ಯವು ಬೈಕ್‌ನ ಉನ್ನತ-ಸ್ಪೆಕ್ ಡಿಎಲ್‌ಎಕ್ಸ್ ಪ್ರೊ ಮತ್ತು ಆನಿವರ್ಸರಿ ಎಡಿಷನ್ ಟ್ರಿಮ್‌ಗಳಲ್ಲಿ ಮಾತ್ರ ಲಭ್ಯವಿದೆ. DLX Pro ಬೆಲೆ ₹2,03,179 ಆಗಿದ್ದರೆ, ವಾರ್ಷಿಕ ಆವೃತ್ತಿಯ ಬೆಲೆ ₹2,05,679. ದೆಹಲಿಯಲ್ಲಿ ಎರಡೂ ಬೈಕ್‌ಗಳ ಎಕ್ಸ್‌ಷೋರೂಂ ದರವನ್ನು ಇಲ್ಲಿ ನಮೂದಿಸಲಾಗಿದೆ.

ಹೊಸ iOS ಹೊಂದಾಣಿಕೆಯ ಏಕೀಕರಣದ ಹೊರತಾಗಿ, ಮೋಟಾರ್‌ ಸೈಕಲ್‌ನಲ್ಲಿನ ಉಳಿದ ಫೀಚರ್‌ಗಳು ಹಾಗೆಯೇ ಉಳಿದಿದೆ. ಫುಲ್-ಎಲ್‌ಇಡಿ ಲೈಟಿಂಗ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್-ಸ್ಟ್ಯಾಂಡ್‌ನ ಎಂಜಿನ್ ಇನ್ಹಿಬಿಟರ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್‌ನಂತಹ ಅದೇ ರೀತಿಯ ವೈಶಿಷ್ಟ್ಯಗಳು ಮುಂದುವರಿದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...