ಸಣ್ಣ ವಯಸ್ಸಿನಲ್ಲೇ ವಿವೇಚನಾಶೀಲ ಹೂಡಿಕೆ ಮಾಡಿದಲ್ಲಿ ಒಳ್ಳೆಯ ರಿಟರ್ನ್ಸ್ ಪಡೆಯಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಹೂಡಿಕೆಯ ವಿಚಾರಕ್ಕೆ ಬಂದರೆ ಭಾರೀ ನಂಬಿಕಸ್ಥ ಆಯ್ಕೆಗಳಲ್ಲಿ ಒಂದಾಗಿದೆ.
ರಾಷ್ಟ್ರೀಯ ಉಳಿತಾಯ ಸಂಸ್ಥೆಯು 1968ರಲ್ಲಿ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಸಣ್ಣ ಉಳಿತಾಯಗಳನ್ನು ದೊಡ್ಡ ಹೂಡಿಕೆಯ ಆಯ್ಕೆಯನ್ನಾಗಿ ಮಾಡಲು ಈ ಯೋಜನೆಯನ್ನು ತರಲಾಗಿದೆ.
ಮನೆ ನಿರ್ಮಾಣ ಮಾಡುತ್ತಿದ್ದೀರಾ….? ಅಡುಗೆ ಕೋಣೆಯ ವಾಸ್ತು ಬಗ್ಗೆ ಇರಲಿ ಗಮನ
ಪಿಪಿಎಫ್‌ನಲ್ಲಿ ನೀವು 1000 ರೂ.ಗಳನ್ನು ಹೂಡಿಕೆ ಮಾಡಿದರೂ ಸಹ ಅದು ನಿಮಗೆ ಸುದೀರ್ಘಾವಧಿಯಲ್ಲಿ ಐದು ಲಕ್ಷ ರೂ.ಗಳನ್ನು ನೀಡಬಲ್ಲದು.
ಪ್ರಸಕ್ತ ಪಿಪಿಎಫ್ ಮೇಲೆ 7.1% ಬಡ್ಡಿದರ ಸಿಗುತ್ತಿದ್ದು, ಕನಿಷ್ಠ 500 ರೂ.ಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೂ ಪ್ರತಿ ವರ್ಷ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಗರಿಷ್ಠ 12 ವ್ಯವಹಾರಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
ಪಿಪಿಎಫ್ 15 ವರ್ಷಗಳಲ್ಲಿ ಮೆಚ್ಯೂರ್ ಆಗಲಿದ್ದು, ಇದಾದ ಬಳಿಕ ನೀವು ನಿಮ್ಮ ಹಣವನ್ನು ಹಿಂಪಡೆಯಬಹುದು ಅಥವಾ ಪಿಪಿಎಫ್ ಖಾತೆಯನ್ನು ತಲಾ 5 ವರ್ಷಗಳ ಬ್ಲಾಕ್‌ನಂತೆ ವಿಸ್ತರಿಸಬಹುದು.
ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂತಾ ದುಃಸ್ಥಿತಿ..? ಹಾಳೆ ಮೇಲೆ ಎಕ್ಸ್ ರೇ ವರದಿ ಮುದ್ರಣ..!
ನೀವು ಪ್ರತಿ ತಿಂಗಳು 1,000 ರೂ.ಗಳಂತೆ 15 ವರ್ಷಗಳವರೆಗೂ ಹೂಡಿಕೆ ಮಾಡುತ್ತಾ ಸಾಗಿದಲ್ಲಿ, ನೀವು ಒಟ್ಟಾರೆ 1.8 ಲಕ್ಷ ರೂ.ಗಳನ್ನು ಹೂಡಲಿದ್ದೀರಿ. ಈ ಮೊತ್ತದ ಮೇಲೆ ನಿಮಗೆ ವಾರ್ಷಿಕ 7.1% ಬಡ್ಡಿಯಂತೆ 1.45 ಲಕ್ಷ ರೂ.ಗಳು ಸೇರಿಕೊಂಡು ಒಟ್ಟಾರೆ 3.25 ಲಕ್ಷ ರೂ.ಗಳು ನಿಮಗೆ ಸಿಗುತ್ತದೆ.
ಇದೇ ಹಣವನ್ನು 5 ವರ್ಷಗಳ ಮಟ್ಟಿಗೆ ಪಿಪಿಎಫ್‌ನಲ್ಲಿ ಮುಂದುವರೆಸಿದರೆ ನಿಮಗೆ 3.25 ಲಕ್ಷ ರೂ.ಗಳು 5.32 ಲಕ್ಷ ರೂಗಳಾಗಿ ಬೆಳೆಯಲಿದೆ.
ಎಮರ್ಜೆನ್ಸಿ ಪರ್ಸ್ ನಿಮ್ಮ ಬಳಿ ಇದೆಯಾ……?
ಇನ್ನೂ ಐದು ವರ್ಷಗಳ ಮಟ್ಟಿಗೆ ಪಿಪಿಎಫ್‌ನಲ್ಲಿ ದುಡ್ಡು ಇಟ್ಟರೆ 5.32 ಲಕ್ಷ ರೂ.ಗಳಿಂದ 8.24 ಲಕ್ಷ ರೂಗಳಿಗೆ ಬೆಳೆಯಲಿದೆ. ಹೀಗೇ ಮಾಡುತ್ತಾ ಸಾಗಿ, ನೀವು 35 ವರ್ಷಗಳ ಕಾಲ ಪಿಪಿಎಫ್ ಇದೇ ಮೊತ್ತವನ್ನು ಬೆಳಸುತ್ತಾ ಸಾಗಿದಲ್ಲಿ ಆ ಮೊತ್ತವು 26.32 ಲಕ್ಷ ರೂ.ಗಳಾಗಿ ಬೆಳೆಯಲಿದೆ. ಇದಕ್ಕಾಗಿ ನೀವು ನಿಮ್ಮ 20ನೇ ವಯಸ್ಸಿನಿಂದಲೇ ಹೂಡಿಕೆ ಮಾಡುವುದನ್ನು ಆರಂಭಿಸಬೇಕಾಗುತ್ತದೆ.