alex Certify ಎಮರ್ಜೆನ್ಸಿ ಪರ್ಸ್ ನಿಮ್ಮ ಬಳಿ ಇದೆಯಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಮರ್ಜೆನ್ಸಿ ಪರ್ಸ್ ನಿಮ್ಮ ಬಳಿ ಇದೆಯಾ……?

ನಾವು ಹೊರಗಡೆ ಹೋಗುತ್ತಿದ್ದೇವೆ ಎಂದರೆ ನಮ್ಮೊಂದಿಗೆ ಬ್ಯಾಗ್ ಸದಾ ಇರುತ್ತದೆ. ಅದರಲ್ಲಿ ನಿಮಗೆ ಸಂಬಂಧಿಸಿದ ವಸ್ತುಗಳು ಎಷ್ಟೇ ಇದ್ದರೂ ಚಿಕ್ಕ ಎಮರ್ಜೆನ್ಸಿ ಪರ್ಸ್ ಕೂಡ ಇಟ್ಟುಕೊಳ್ಳಬೇಕು. ಯಾಕೆಂದರೆ…

ಕೆಲಸಕ್ಕೆ ಅಥವಾ ಕಾಲೇಜಿಗೆ ಹೋಗುತ್ತಿದ್ದರೆ, ಸಂಜೆಯಾಗುವ ಹೊತ್ತಿಗೆ ಮುಖ ಜಿಡ್ಡಿನಿಂದ ಕೂಡಿರುತ್ತದೆ. ಈ ಸಮಸ್ಯೆಯಿಂದ ಹೊರಗೆ ಬಂದು ಮುಖವನ್ನು ತಾಜಾ ಆಗಿ ಇಟ್ಟುಕೊಳ್ಳಬೇಕೆಂದರೆ ಚಿಕ್ಕದಾದ ಫೇಸ್ ವಾಶ್ ತಪ್ಪದೆ ಇರಬೇಕು. ಅದೇ ರೀತಿಯಲ್ಲಿ ಮಾಯಿಶ್ಚರೈಸರ್ ಕೂಡ ಇಟ್ಟುಕೊಳ್ಳಬೇಕು. ಆಗಲೇ ನಿಮ್ಮ ಚರ್ಮ ತೇವದಿಂದ ಕೂಡಿರುತ್ತದೆ. ಒಣಗಿ ಜಿಡ್ಡಾದಂತೆ ಇರುವುದಿಲ್ಲ. ಇವು ಎಮರ್ಜೆನ್ಸಿ ಪರ್ಸನಲ್ಲಿ ಇರಲೇಬೇಕು.

ಸೋಮಾರಿಯಾಗಿ ನೀವೂ ಪ್ರತಿ ದಿನ ಹಲ್ಲುಜ್ಜಲ್ವಾ…..? ಹಾಗಿದ್ರೆ ಈ ಸುದ್ದಿ ಓದಿ

ಇನ್ನೂ ನಿಮ್ಮ ಕೂದಲು ಕೆದರಿ ನೋಡಲು ಅಸಹ್ಯವಾಗಿ ಇರಬಾರದು ಎಂದರೆ ಒಂದು ಚಿಕ್ಕ ಬಾಚಣಿಗೆ ಕೂಡ ಎಮರ್ಜೆನ್ಸಿ ಪರ್ಸನಲ್ಲಿ ಇಟ್ಟುಕೊಂಡಿರಬೇಕು.
ಇನ್ನು ಮುಖದಲ್ಲಿ ಜಿಡ್ಡಿನ ಅಂಶವನ್ನು ಹೋಗಲಾಡಿಸಲು ಆಗಾಗ ಮುಖ ಒರೆಸಿಕೊಳ್ಳಲು ಟಿಶ್ಯೂಗಳನ್ನು ಇಟ್ಟುಕೊಂಡಿದ್ದರೆ ಒಳ್ಳೆಯದು. ದಿನಕ್ಕೆ ನಾಲ್ಕು ಐದಾದರೂ ಟಿಶ್ಯೂ ನಿಮ್ಮ ಪರ್ಸ್ ನಲ್ಲಿರಬೇಕು.

ಒಂದು ಜೊತೆ ರಬ್ಬರ್ ಬ್ಯಾಂಡ್, 1 ಕ್ಲಿಪ್ ಇಟ್ಟುಕೊಂಡರೆ ತೊಂದರೆ ಇರುವುದಿಲ್ಲ. ಒಂದು ವೇಳೆ ಬಟ್ಟೆ ಸಣ್ಣಗೆ ಹರಿದರೂ ನೋಡಲು ಅಸಹ್ಯವಾಗಿರುತ್ತದೆ. ಈ ಸಮಸ್ಯೆ ಇಲ್ಲದಂತಾಗಲು ಕೆಲವಾರು ಸೇಫ್ಟಿ ಪಿನ್ನುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.

NEP ಗೆ ಒಳ್ಳೆಯ ಮಾಡೆಲ್ ಸಿಇಟಿ ಟಾಪರ್ ಮೇಘನ್: ಅಶ್ವತ್ಥನಾರಾಯಣ

ಕೊನೆಯ ಪಕ್ಷ ಇನ್ನೂರು ಮುನ್ನೂರು ರೂಪಾಯಿ ಹಣ, ಸ್ವಲ್ಪ ಚಿಲ್ಲರೆ ಇರುವುದು ಕೂಡ ಒಳ್ಳೆಯದು. ಇನ್ನು ಕೊನೆಯದಾಗಿ ತಿಂಗಳು ಋತುಚಕ್ರ ಒಮ್ಮೊಮ್ಮೆ ಏರುಪೇರಾಗಬಹುದು. ಅಂತಹ ಸಮಯದಲ್ಲಿ ಏನು ತೊಂದರೆಯಾಗದಿರಲಿ ಎಂದು ಒಂದೆರಡು ಸಾನಿಟರಿ ನ್ಯಾಪ್ಕಿನ್ ಗಳನ್ನು ಎಮರ್ಜೆನ್ಸಿ ಪರ್ಸ್ ನಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...