alex Certify ಕಡಿಮೆ ಖರ್ಚಿನಲ್ಲಿ ಶುರು ಮಾಡಿ ಬೇಡಿಕೆಯಲ್ಲಿರುವ ಬ್ಯುಸಿನೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಖರ್ಚಿನಲ್ಲಿ ಶುರು ಮಾಡಿ ಬೇಡಿಕೆಯಲ್ಲಿರುವ ಬ್ಯುಸಿನೆಸ್

ಭಾರತದಲ್ಲಿ ಟೀ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಮನೆಯಲ್ಲಿ ಮಾತ್ರವಲ್ಲ ರಸ್ತೆ ಬದಿಯಲ್ಲೂ ಜನರು ಟೀ ಕುಡಿಯಲು ಇಷ್ಟಪಡ್ತಾರೆ. ನಿಮ್ಮದೆ ಸ್ವಂತ ಉದ್ಯೋಗ ಶುರು ಮಾಡಿ, ಹಣ ಗಳಿಸುವ ಆಲೋಚನೆಯಲ್ಲಿದ್ದರೆ ನೀವೂ ಕುಲ್ಲಡ್ ಟೀ ಬ್ಯುಸಿನೆಸ್ ಶುರು ಮಾಡಬಹುದು. ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ವಿಮಾನ ನಿಲ್ದಾಣಗಳಲ್ಲಿ ಕುಲ್ಲಡ್ ಚಹಾಕ್ಕೆ ನಿರಂತರ ಬೇಡಿಕೆ ಇದೆ.

ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು, ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ, ಪ್ಲಾಸ್ಟಿಕ್ ಮತ್ತು ಪೇಪರ್ ಕಪ್‌ಗಳಲ್ಲಿ ಚಹಾ ನೀಡುವುದನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು. ಕುಲ್ಲಡ್ ವ್ಯಾಪಾರವನ್ನು ಉತ್ತೇಜಿಸಲು ಮೋದಿ ಸರ್ಕಾರ, ಕುಂಬಾರ ಸಬಲೀಕರಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ದೇಶಾದ್ಯಂತ ಕುಂಬಾರರಿಗೆ ವಿದ್ಯುತ್ ಚಕ್ರಗಳನ್ನು ನೀಡುತ್ತಿದೆ.

ಈ ವ್ಯಾಪಾರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದು. ಇದಕ್ಕಾಗಿ ಸ್ವಲ್ಪ ಜಾಗದ ಜೊತೆಗೆ 5,000 ರೂಪಾಯಿಯ ಅವಶ್ಯಕತೆಯಿದೆ. ಕುಲ್ಲಡ್ ಟೀ ಬೆಲೆ 50 ರೂಪಾಯಿಯಿದೆ. ಕುಲ್ಲಡ್ ಲಸ್ಸಿ ಬೆಲೆ 150 ರೂಪಾಯಿಯಿದೆ. ಕುಲ್ಲಡ್ ಹಾಲಿನ ಬೆಲೆ 150 ರೂಪಾಯಿಯಿದೆ. ಕೆಲವು ಕಡೆ ಕುಲ್ಲಡ್ ಟೀಯನ್ನು 15-20 ರೂಪಾಯಿಗೂ ಮಾರಾಟ ಮಾಡ್ತಿದ್ದಾರೆ. ಮನಸ್ಸು ಮಾಡಿದ್ರೆ ನೀವು ದಿನಕ್ಕೆ 1000 ರೂಪಾಯಿ ಉಳಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...