alex Certify ಮೊದಲ ಬಾರಿಗೆ ಕ್ಯಾಮರಾ ಮುಂದೆ ಮಾತನಾಡಿದ ಇಂರ್ಟನೆಟ್​ ಸೆಲೆಬ್ರಿಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿಗೆ ಕ್ಯಾಮರಾ ಮುಂದೆ ಮಾತನಾಡಿದ ಇಂರ್ಟನೆಟ್​ ಸೆಲೆಬ್ರಿಟಿ…!

ಯೂಟ್ಯೂಬರ್​ ಮತ್ತು ಕಂಟೆಂಟ್​ ಕ್ರಿಯೇಟರ್​ ಖಬಾನೆ ಲೇಮ್​ ಇಂಟರ್​ನೆಟ್​ನ ದೊಡ್ಡ ಸೆಲೆಬ್ರಿಟಿ. ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೋಲ್​ ಮಾಡುವಾಗ ಅವರ ರೀಲ್​ಗಳು ಸಾಮಾನ್ಯವಾಗಿ ಕಂಡಿರುತ್ತದೆ. ಖಬಿ ಲೇಮ್​ ಎಂದೇ ಜನಪ್ರಿಯವಾಗಿದೆ.

ಅವರು ಲೈಫ್​ ಹ್ಯಾಕ್​ ವಿಡಿಯೊಗಳನ್ನು ಪೋಸ್ಟ್​ ಮಾಡಲು ಪ್ರಸಿದ್ಧರಾಗಿದ್ದು, ಹೆಚ್ಚು ಸಂಕೀರ್ಣ ವಿಷಯಗಳನ್ನು ಸರಳ ರೀತಿಯಲ್ಲಿ ನ್ಯಾವಿಗೇಟ್​ ಮಾಡುತ್ತಾರೆ. ಆದರೆ ಒಂದೇ ಪದವನ್ನು ಉಚ್ಚರಿಸದೆ ಈ ಸಾಹಸ ಮಾಡುತ್ತಾರೆ.

ಕುತೂಹಲಕಾರಿ ಎಂದರೆ 22 ವರ್ಷ ವಯಸ್ಸಿನ ಈ ಕಂಟೆಂಟ್​ ಕ್ರಿಯೇಟರ್​ ತಮ್ಮ ವಿಡಿಯೊದಲ್ಲಿ ಯಾವುದೇ ಪದವನ್ನು ಹೇಳದಿದ್ದರೂ ಸಹ ಸಾಮಾಜಿಕ ಮಾಧ್ಯಮದಲ್ಲಿ 200 ಮಿಲಿಯನ್​ ಫಾಲೋಯರ್​ ಹೊಂದಿದ್ದಾರೆ.

ಈಗ ಅವರು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಮಾತನಾಡಿದ್ದು, ಇದೇ ವಿಷಯ ಭಾರೀ ಚರ್ಚೆಯಲ್ಲಿದೆ. ಇಟಲಿಯ ಚಿವಾಸ್ಸೊದ ಟಿಕ್​ಟಾಕ್​ನ ಹೆಚ್ಚು ಫೇಮಸ್​ ಆಗಿರುವ ಕಂಟೆಂಟ್​ ಕ್ರಿಯೇಟರ್​ ಸಂದರ್ಶಿಸಿದ್ದಾರೆ, ಅವರು ಖಾಬಿಯೊಂದಿಗೆ ಮಾತನಾಡಲು ಮತ್ತು ಅವರ ಕಥೆಯನ್ನು ಪ್ರಪಂಚದೊಂದಿಗೆ ಹಂಚಿಕೊಂಡಿಕೊಂಡಿದ್ದಾರೆ.

ಅವರು ಪ್ರಪಂಚದಾದ್ಯಂತ ಖ್ಯಾತಿಯನ್ನು ಗಳಿಸುವ ಮೊದಲು, ಕಾರ್ಖಾನೆಯ ಕೆಲಸಗಾರರಾಗಿದ್ದರು. ಮುಂದೆ ತನ್ನ ಕುಟುಂಬದೊಂದಿಗೆ ಸೆನೆಗಲ್​ನಿಂದ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಖಾಬಿ ಇಟಲಿಗೆ ತೆರಳಿದ್ದಾರೆ.

ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್​ ಬೈನಾನ್ಸ್​ ತಮ್ಮ ಜಾಗತಿಕ ಬ್ರ್ಯಾಂಡ್​ ರಾಯಭಾರಿಯಾಗಿ ಖಾಬಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಖಾಬಿ ಕಷ್ಟದ ದಿನಗಳು ಕರಗಿದ್ದು, ಈಗ ಅವರ ಅಂದಾಜು ನಿವ್ವಳ ಮೌಲ್ಯವು 1&2 ಮಿಲಿಯನ್​ ಇವೆ ಎಂದು ವರದಿಗಳು ಉಲ್ಲೇಖಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...