alex Certify ಜಗತ್ತಿನ ಅತಿ ಚಿಕ್ಕ Airbnb ಯಲ್ಲಿ 24 ಗಂಟೆ ಕಳೆದ ಯೂಟ್ಯೂಬರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತಿ ಚಿಕ್ಕ Airbnb ಯಲ್ಲಿ 24 ಗಂಟೆ ಕಳೆದ ಯೂಟ್ಯೂಬರ್‌

YouTuber Lives in World's Smallest Airbnb of 25 Square Feet For 24 Hours

ಬಹಳ ಚಿಕ್ಕದಾದ ಮನೆಯಲ್ಲಿ ವಾಸ ಮಾಡುವ ಅನುಭವದ ಬಗ್ಗೆ ನೀವೇನಾದರೂ ಆಲೋಚನೆ ಮಾಡಿದ್ದಲ್ಲಿ, ಯೂಟ್ಯೂಬರ್‌ ರ‍್ಯಾನ್ ಟರ್ಹಾನ್‌ರ ಲೇಟೆಸ್ಟ್ ವಿಡಿಯೋವನ್ನು ವೀಕ್ಷಿಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಬಲೇ ಫೇಮಸ್ ಆಗಿರುವ ಏರ್‌ಬಿಎನ್ಬಿ ಮಾದರಿಯ ಮನೆ ಇದಾಗಿದೆ.

ಬೋಸ್ಟನ್‌ನ ಹಾರ್ವಡ್‌ ವಿವಿಯಲ್ಲಿ ಈ ಪುಟ್ಟ ಮನೆಯೊಂದನ್ನು ನಿಲ್ಲಿಸಲಾಗಿತ್ತು. ಶಿಲ್ಪಿ ಜೆಫ್ ಸ್ಮಿತ್‌ ನಿರ್ಮಿಸಿರುವ ಈ ಚಲಿಸುವ ಮನೆಯನ್ನು ರ‍್ಯಾನ್‌ ಬಾಡಿಗೆಗೆ ಪಡೆದಿದ್ದಾರೆ. 24 ಗಂಟೆಗಳ ಮಟ್ಟಿಗೆ 25 ಚದರ ಅಡಿಯ ಈ ಮನೆಯನ್ನು ಬಾಡಿಗೆಗೆ ಪಡೆದಿರುವ ರ‍್ಯಾನ್‌ ತಮ್ಮ ಅನುಭವವನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಫ್ರಿಡ್ಜ್ ಹಾಗೂ ಶಾಪಿಂಗ್ ಕಾರ್ಟ್‌ಗಳ ಜೊತೆಗೆ ಈ ಮನೆಯನ್ನು ಹೋಲಿಕೆ ಮಾಡಿದ ರ‍್ಯಾನ್, ಅದರೊಳಗೆ ಇರುವುದು ಅದೆಷ್ಟು ಕ್ಲಿಷ್ಟಕರ ಎಂದು ತೋರಿದ್ದಾರೆ. ಆರೂವರೆ ಅಡಿ ಇರುವ ಕುಸ್ತಿ ಪಟು ಡ್ವೇನ್ ’ದಿ ರಾಕ್‌’ ಈ ಮನೆಯೊಳಗೆ ತೂರಲಾರರು ಎಂದು ರ‍್ಯಾನ್ ಹೋಲಿಕೆಯನ್ನೂ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...