alex Certify ಭಾರತದ ಕುರಿತು ಪಾಕ್‌ ಬಾಲಕನ ಅಭಿಪ್ರಾಯವೇನು…? ಇಲ್ಲಿದೆ ಬ್ಲಾಗರ್‌ ಶೇರ್‌ ಮಾಡಿದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಕುರಿತು ಪಾಕ್‌ ಬಾಲಕನ ಅಭಿಪ್ರಾಯವೇನು…? ಇಲ್ಲಿದೆ ಬ್ಲಾಗರ್‌ ಶೇರ್‌ ಮಾಡಿದ ವಿಡಿಯೋ

ತಮ್ಮ ಟ್ರಾವೆಲ್​ ಬ್ಲಾಗ್​ ಮೂಲಕ ಯುಟ್ಯೂಬ್​ನಲ್ಲಿ ಸದ್ದು ಮಾಡ್ತಿರುವ ಕಾರ್ಲ್​ ರಾಕ್​ ಬಗ್ಗೆ ನಿಮಗೆ ಗೊತ್ತೇ ಇರಬಹುದು. ಸದ್ಯ ಪಾಕಿಸ್ತಾನದಲ್ಲಿ ಪ್ರವಾಸ ಕೈಗೊಂಡಿದ್ದ ಈ ಪ್ರಸಿದ್ಧ ಯುಟ್ಯೂಬರ್​ ಭಾರತಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಕಾರ್ಲ್​ ರಾಕ್​ 11 ವರ್ಷದ ಪಾಕಿಸ್ತಾನಿ ಬಾಲಕನ ಸಂದರ್ಶನ ಮಾಡಿದ್ದು ಆತನ ಮಾತುಗಳು ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಲಾಹೋರ್​ನಲ್ಲಿ ತಂದೆ ಜೊತೆ ಫುಡ್​ ಸ್ಟಾಲ್​​ನಲ್ಲಿ ಇದ್ದ ಬಾಲಕನ​ ಬಳಿ ಭಾರತದ ಬಗೆಗಿನ ಅಭಿಪ್ರಾಯವನ್ನ ಹೇಳಿ ಅಂದಾಗ ಆತ, ಎಲ್ಲಾ ಕಡೆಯೂ ಒಳ್ಳೆ ಜನ ಹಾಗೂ ಕೆಟ್ಟ ಜನರು ಇರ್ತಾರೆ. ಹಾಗಾಗಿ ನಾವು ಯಾರನ್ನೂ ಹೀಗೆ ಎಂದು ಜಡ್ಜ್​ ಮಾಡೋಕೆ ಆಗಲ್ಲ ಎಂದು ಹೇಳಿದ್ದಾನೆ. ಇದಕ್ಕೆ ರಾಕ್​ ಕೂಡ ಈ ಮಾತು ಸರಿ ಇದೆ ಎಂದು ತಲೆ ಆಡಿಸಿದ್ದಾರೆ.

ಅಂದಹಾಗೆ ಈ ಟ್ರಾವೆಲ್ಲರ್​ ರಾಕ್​ಗೂ ಭಾರತದ ನಡುವೆಯೂ ಒಂದು ವಿಶೇಷವಾದ ಸಂಬಂಧವಿದೆ. ಪ್ರಸ್ತುತ ಭಾರತದಲ್ಲೇ ಇರೋ ರಾಕ್​, ಭಾರತದ ಹುಡುಗಿಯನ್ನೇ ವಿವಾಹವಾಗಿದ್ದಾರೆ. ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿರುವ ರಾಕ್​ ತಮ್ಮ ಯುಟ್ಯೂಬ್​ ಚಾನೆಲ್​ ಪ್ರತಿದಿನ ಪಾಕ್​ ಪ್ರವಾಸದ ಅನುಭವಗಳನ್ನ ಶೇರ್​ ಮಾಡ್ತಾನೇ ಇರ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...