alex Certify ಮದುವೆ ದಿನ ಸ್ನೇಹಿತೆ ಮುಂದೆ ವಿಚಿತ್ರ ಷರತ್ತು ವಿಧಿಸಿದ ವಧು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನ ಸ್ನೇಹಿತೆ ಮುಂದೆ ವಿಚಿತ್ರ ಷರತ್ತು ವಿಧಿಸಿದ ವಧು..!

ಸ್ನೇಹಿತೆಯ ಮದುವೆಯಲ್ಲಿ ಸಖತ್​ ಆಗಿ ರೆಡಿಯಾಗಬೇಕು ಅನ್ನೋ ಆಸೆ ಬಹುತೇಕ ಎಲ್ಲಾ ಯುವತಿಯರಿಗೂ ಇರುತ್ತೆ. ಆದರೆ ನಿಮ್ಮ ಆ ಸ್ನೇಹಿತೆಯೇ ನನ್ನ ಮದುವೆಯಲ್ಲಿ ನೀನು ಸುಂದರವಾಗಿ ಕಾಣಿಸಬಾರದು ಎಂದು ಹೇಳಿಬಿಟ್ರೆ..? ಎಷ್ಟು ಕಷ್ಟ ಅಲ್ವಾ..? ಆದರೆ ಇಂತಹದ್ದೊಂದು ಸಂಕಷ್ಟಕ್ಕೆ ಇಲ್ಲೊಬ್ಬ ಯುವತಿ ಸಿಲುಕಿದ್ದಾಳೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಕತೆಯನ್ನ ಹಂಚಿಕೊಂಡಿರುವ ಯುವತಿ, ತನ್ನ ಸ್ನೇಹಿತೆ ನನ್ನ ಬಳಿ ನೀನು ಮೇಕಪ್​ ಧರಿಸೋದೇ ಹೌದಾದಲ್ಲಿ ನನ್ನ ಮದುವೆಗೆ ಬರಬೇಡ ಎಂದು ಹೇಳಿದ್ದಳಂತೆ.

ನೀನು ಮೇಕಪ್​ ಹಾಕುವಂತಿಲ್ಲ. ನನ್ನ ವಿಶೇಷ ದಿನದಲ್ಲಿ ನೀನು ನನಗಿಂತ ಸುಂದರವಾಗಿ ಕಾಣಬಾರದು. ಎಂದು ಈ ಪೋಸ್ಟ್​ಗೆ ಶೀರ್ಷಿಕೆ ನೀಡಲಾಗಿದೆ.

ನಾನೊಬ್ಬ ಮೇಕಪ್ ಆರ್ಟಿಸ್ಟ್​. ನಾನು ನಿತ್ಯವೂ ಮೇಕಪ್​ ಧರಿಸುತ್ತೇನೆ. ಮೇಕಪ್​ ಮಾಡೋದು ನನಗೆ ಕರಗತವಾಗಿದೆ. ನನ್ನ ಹಾಗೂ ನನ್ನ ಸ್ನೇಹಿತೆಯ ಅಭಿಪ್ರಾಯದಂತೆ ನಾನು ಮೇಕಪ್​ ಹಾಕಿದಾಗ ಇನ್ನೂ ಸುಂದರವಾಗಿ ಕಾಣುತ್ತೇನೆ. ಮೇಕಪ್​ ಇದ್ದರೆ ನನ್ನ ಆತ್ಮವಿಶ್ವಾಸ ಹೆಚ್ಚಿದಂತೆ ನನಗೆ ಭಾಸವಾಗುತ್ತೆ.

ಹುಡುಗರು ನನ್ನ ಸೌಂದರ್ಯಕ್ಕೆ ಮಾರು ಹೋದಾಗಲೆಲ್ಲ ನನ್ನ ಸ್ನೇಹಿತೆ ಆಕೆಯನ್ನ ಮೇಕಪ್ ಇಲ್ಲದೇ ನೋಡಿ ಎಂದು ಹೇಳುತ್ತಿದ್ದಳು. ನನ್ನ ಮೇಕಪ್​ ಬಗ್ಗೆ ಹೊಟ್ಟೆಕಿಚ್ಚನ್ನ ಹೊಂದಿದ್ದ ಆಕೆ ಇದೀಗ ನನ್ನ ಮದುವೆಗೆ ನೀನು ಮೇಕಪ್ ಧರಿಸಿ ಬರುವಂತಿಲ್ಲ ಎಂದು ಷರತ್ತನ್ನ ವಿಧಿಸಿದ್ದಾಳೆ. ಈ ಮದುವೆಗೆ ನಾನು ಹೋಗಬೇಕೆ..? ಎಂಬ ಪ್ರಶ್ನೆಯನ್ನ ನೆಟ್ಟಿಗರ ಮುಂದೆ ಇರಿಸಿದ್ದಾರೆ.

ಈ ಪೋಸ್ಟ್ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಅಲ್ಲದೇ ನೆಟ್ಟಿಗರು ನಿಮ್ಮ ಮೇಲೆ ಅಸೂಯೆಯನ್ನ ಹೊಂದಿರುವ ಈಕೆ ನಿಮ್ಮ ನಿಜವಾದ ಗೆಳತಿ ಆಗಿರೋಕೆ ಸಾಧ್ಯವೇ ಇಲ್ಲ ಎಂದು ಜರಿದಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...