alex Certify ಕಳ್ಳತನ ಮಾಡಿದವನಿಗೆ‌ ರೆಸ್ಟೋರೆಂಟ್‌ ಮಾಲೀಕನಿಂದ ʼಉದ್ಯೋಗʼದ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡಿದವನಿಗೆ‌ ರೆಸ್ಟೋರೆಂಟ್‌ ಮಾಲೀಕನಿಂದ ʼಉದ್ಯೋಗʼದ ಆಫರ್

ಸಾಮಾನ್ಯವಾಗಿ ಕಳ್ಳತನದ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯನ್ನ ವಿಧಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದು ವೇಳೆ ಕಳ್ಳತನ ಮಾಡುತ್ತಿರುವ ದೃಶ್ಯಾವಳಿಗಳು ಕೈಗೆ ಸಿಕ್ಕರಂತೂ ಆರೋಪಿಯನ್ನ ಹುಡುಕೋದು ಇನ್ನಷ್ಟು ಸುಲಭವಾಗುತ್ತೆ. ಆದರೆ ಅಮೆರಿಕದ ರೆಸ್ಟೋರೆಂಟ್​ ಮಾತ್ರ ಕಳ್ಳತನ ಮಾಡಿದ ವ್ಯಕ್ತಿಗೆ ಕೆಲಸದ ಆಫರ್​ ನೀಡಿದೆ. ಈ ಬಗ್ಗೆ ರೆಸ್ಟೋರೆಂಟ್​​ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದು ಸಖತ್​ ವೈರಲ್​ ಆಗಿದೆ.

ರಾತ್ರಿ ವೇಳೆ ಜಾರ್ಜಿಯಾದ ಸೌತ್​ವೆಸ್ಟ್​ ಗ್ರಿಲ್​ ರೆಸ್ಟೋರೆಂಟ್ ​ಗೆ ನುಗ್ಗಿದ ಕಳ್ಳ ಪ್ರಸಿದ್ಧ ಮೆಕ್ಸಿಕನ್ ಖಾದ್ಯವೊಂದನ್ನ ತಿಂದು ತೇಗಿದ್ದ. ಮುರಿದು ಹೋದ ಬಾಗಿಲು ಹಾಗೂ ಕಳ್ಳತನ ಮಾಡುತ್ತಿರುವ ದೃಶ್ಯಾವಳಿಯ ಸ್ಕ್ರೀನ್​ಶಾಟ್​ನ್ನು ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ ರೆಸ್ಟೋರೆಂಟ್​ ಮಾಲೀಕ, ಈ ರೀತಿ ಕಳ್ಳತನ ಮಾಡಿದ ವ್ಯಕ್ತಿ ಬಹುಶಃ ಆತನ ಜೀವನದಲ್ಲಿ ಬಹು ದೊಡ್ಡ ಸಂಕಷ್ಟವನ್ನ ಎದುರಿಸುತ್ತಿರಬಹುದು. ಅಥವಾ ಆತನಿಗೆ ಆರ್ಥಿಕ ಸಂಕಷ್ಟವಿದ್ದಿರಬಹುದು. ಪೊಲೀಸ್​ ತನಿಖೆ, ವಿಚಾರಣೆ ಯಾವುದೂ ಬೇಡ. ನೀನು ಜೀವನ ನಡೆಸಲು ಮಾಡಿಕೊಂಡ ಈ ದಾರಿಗಿಂತ ಒಳ್ಳೆಯ ಆಯ್ಕೆಗಳು ಇವೆ. ನಾವು ಒಟ್ಟಿಗೆ ಕೂತು ಮಾತನಾಡೋಣ. ಹಾಗೂ ನಿಮ್ಮ ಜೀವನ ನಿರ್ವಹಣೆಗೆ ಯಾವುದಾದರೂ ಒಳ್ಳೆಯ ದಾರಿಯನ್ನ ಹುಡುಕೋಣ ಎಂದು ತಮ್ಮ ವೈಯಕ್ತಿಕ ಮೊಬೈಲ್​ ನಂಬರ್​ನ್ನು ಶೇರ್​ ಮಾಡಿದ್ದಾರೆ. ರೆಸ್ಟೋರೆಂಟ್​ ಮಾಲೀಕನ ಈ ಮಾನವೀಯತೆಗೆ ನೆಟ್ಟಿಗರು ತಲೆಬಾಗಿದ್ದಾರೆ.

Our burritos are such a smash hit we’ve got people breaking in at 4am for their fix. So if ya see our door looking…

Posted by Diablo's Southwest Grill on Saturday, April 3, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...