alex Certify ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಹಳೆಯ ಬಲೂನು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಹಳೆಯ ಬಲೂನು….!

ಶುಭ ಕಾರ್ಯಗಳ ವೇಳೆ ಮನೆಯನ್ನ ಅಲಂಕಾರ ಮಾಡೋಕೆ ಬಲೂನುಗಳನ್ನ ಬಳಕೆ ಮಾಡೋದು ಸರ್ವೇ ಸಾಮಾನ್ಯ. ಇದಕ್ಕಾಗಿ ಹೊಸ ಹೊಸ ಬಗೆಯ ಬಲೂನುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಎಂದಾದರೂ ಅತ್ಯಂತ ಹಳೆಯ ಬಲೂನು ಯಾವುದಾಗಿರಬಹುದು ಎಂದು ಯೋಚಿಸಿದ್ದೀರಾ..?

ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಬಳಿ ಬರೋಬ್ಬರಿ 30 ವರ್ಷದ ಬಲೂನು ಇದೆ ಎಂದು ಹೇಳಿಕೊಂಡಿದ್ದು, ಇದು ವಿಶ್ವದ ಅತ್ಯಂತ ಹಳೆಯ ಬಲೂನು ಎಂದು ನಂಬಿದ್ದಾರೆ. ಈತನ ಅಜ್ಜಿ ಈತನ ಜನ್ಮದಿನವನ್ನ ಗುರುತು ಮಾಡಿಕೊಳ್ಳಲು ಈ ಬಲೂನನ್ನ ತಂದಿದ್ದರು ಎನ್ನಲಾಗಿದೆ.

28 ವರ್ಷದ ರ್ಯಾನ್​ ಹ್ಯಾರಿಸನ್​​ ಎಂಬವರಿಗೆ ಇದು ಗಂಡು ಎಂದು ಬರೆಯಲಾದ ಬಲೂನನ್ನ ಅವರ ಅಜ್ಜಿ 1992ರಲ್ಲಿ ನೀಡಿದ್ದರು ಎನ್ನಲಾಗಿದೆ.

ಈ ಬಲೂನಿನ ಮೇಲೆ ಒಂದು ಕರಡಿಯ ಚಿತ್ರವನ್ನ ಬಿಡಿಸಲಾಗಿದೆ. ಹಾಗೂ ಈ ಬಲೂನನ್ನ ಫಾರ್​ಎವರ್​ ಫ್ರೆಂಡ್ಸ್ ಎಂಬ ಬ್ರ್ಯಾಂಡ್​ ವಿನ್ಯಾಸಗೊಳಿಸಿದೆ. ಮನೆಯಲ್ಲಿ ಬೇರೆ ಯಾವುದೋ ವಸ್ತುವನ್ನ ಹುಡುಕುತ್ತಿದ್ದ ವೇಳೆ ರ್ಯಾನ್​ ತಂದೆ – ತಾಯಿಗೆ ಈ ಬಲೂನು ಸಿಕ್ಕಿದೆ.

ಈ ಬಲೂನನ್ನ ಪಡೆದ ಬಳಿಕ ರ್ಯಾನ್​ ಹಳೆಯ ಕತೆಗಳನ್ನ ಮೆಲಕು ಹಾಕಿದ್ದಾರೆ. ಈಗ 82 ವರ್ಷ ವಯಸ್ಸಿನವರಾದ ಅಜ್ಜಿ ರ್ಯಾನ್​ 1992 ಜುಲೈ 11ರಂದು ತಾನು ಜನಿಸಿದ್ದ ವೇಳೆ ಈ ಬಲೂನನ್ನ ನೀಡಿದ್ದರು. ನೀವು ನಂಬುತ್ತಿರೋ ಇಲ್ಲವೋ ಈ ಬಲೂನಿನಲ್ಲಿ ಗಾಳಿ ಇನ್ನೂ ಹಾಗೇ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...