alex Certify ವಿಶ್ವದ ಅತಿ ದೊಡ್ಡ ಆಪ್ಟಿಕಲ್ ಇಲ್ಯೂಷನ್ ಹೇಗಿದೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ದೊಡ್ಡ ಆಪ್ಟಿಕಲ್ ಇಲ್ಯೂಷನ್ ಹೇಗಿದೆ ಗೊತ್ತಾ…?

ವಿಶ್ವಾದ್ಯಂತ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇದೆ. ಇದೀಗ ದಕ್ಷಿಣ ಕೊರಿಯಾದ ಸಿಯೋಲ್ ನಗರದಲ್ಲಿ ಬೃಹತ್ತಾದ ಆಪ್ಟಿಕಲ್ ಇಲ್ಯೂಷನ್ ಮೂಲಕ ಅಲೆಗಳ ಅಪ್ಪಳಿಸುವಂತೆ ಅನುಭವ ನೀಡುವ ಪರದೆ ಸ್ಥಾಪಿಸಿದ್ದು, ವಿಶ್ವದ ಗಮನ ಸೆಳೆದಿದೆ.

ಸಾರ್ವಜನಿಕ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಅತಿದೊಡ್ಡ ಹೊರಾಂಗಣ ಹೈಡೆಫಿನಿಶನ್ ಪರದೆ ಇದಾಗಿದ್ದು, ಇದರ ಮೇಲೆ ನೀರಿನ ದೈತ್ಯ ಅಲೆಗಳು ಅಪ್ಪಳಿಸುವುದನ್ನು ವೀಕ್ಷಿಸಬಹುದಾಗಿದೆ.

80 ಮೀಟರ್ ಅಗಲ, 20 ಮೀಟರ್ ಎತ್ತರದ ಪರದೆ ಮೇಲೆ ಗಂಟೆಗೊಮ್ಮೆ ಅನಾಮೊರ್ಫಿಕ್ ಇಲ್ಯೂಷನ್ ಎಂದು ಕರೆಯಲಾಗುವ ವಿಶೇಷ ಅನುಭವವನ್ನು ವೀಕ್ಷಿಸಲು ಅವಕಾಶವಿರುತ್ತದೆ.

ಸ್ಯಾಮ್ಸಂಗ್ ಸ್ಮಾರ್ಟ್ ಎಲ್ಇಡಿ ತಂತ್ರಜ್ಞಾನವನ್ನು ಬಳಸಿಕೊಂಡು, 1620 ಚದರ ಮೀಟರ್ ಸ್ಮಾರ್ಟ್ ಪರದೆಯಲ್ಲಿ ಇದನ್ನು ಎರಡು ತಿಂಗಳ ಅವಧಿಯಲ್ಲಿ ರಚಿಸಲಾಗಿದೆ.

ಈ ಸಿಮುಲೇಶನ್ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಒಂದು ವಾರದ ಹಿಂದೆ ಪೋಸ್ಟ್ ಮಾಡಲಾಗಿದ್ದು, ಈವರೆಗೆ 4 ಲಕ್ಷ ಮಂದಿ ವೀಕ್ಷಿಸಿದ್ದಾರೆ. ನೂರಾರು ಮಂದಿ ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...