alex Certify ಕೋವಿಡ್-19: ಮುನ್ನೆಚ್ಚರಿಕೆ ವಹಿಸುವಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19: ಮುನ್ನೆಚ್ಚರಿಕೆ ವಹಿಸುವಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದು…!

Women More Likely to Follow Covid-19 Regulations Like Mask Wearing, Hand Washing Than Men

ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆಂದು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ನ್ಯೂಯಾರ್ಕ್ ವಿವಿ ಹಾಗೂ ಯೇಲ್ ವಿವಿಗಳು ನಡೆಸಿದ ಅಧ್ಯಯನವೊಂದನ್ನು Behavioral Science & Policy ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಸೋಂಕು ಪಸರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ವಿಚಾರದಲ್ಲಿ ಮುಂದಿರುವುದಲ್ಲದೇ, ಈ ಕುರಿತಂತೆ ತಜ್ಞರು ನೀಡುವ ಸಲಹೆಗಳ ಪಾಲನೆ ಮಾಡುವುದರಲ್ಲೂ ಸಹ ಮಹಿಳೆಯರು ಮುಂದಿದ್ದಾರೆ ಎಂದು ಇದೇ ಅಧ್ಯಯನ ತಿಳಿಸುತ್ತದೆ.

ಕೋವಿಡ್-19ಗೆ ಚಿಕಿತ್ಸೆ ಪಡೆಯಲು ಪುರುಷರಿಗಿಂತ ಮಹಿಳೆಯರು ಅತ್ಯಂತ ಹೆಚ್ಚಾಗಿ ವೈದ್ಯರ ಬಳಿ ತೆರಳಿದ್ದಾಗಿಯೂ, ಅವರ ಸಲಹೆಗಳನ್ನು ಹೆಚ್ಚಾಗಿ ಪಾಲಿಸಿದ್ದಾಗಿಯೂ ನ್ಯೂಯಾರ್ಕ್ ವಿವಿಯ ಮನಶಾಸ್ತ್ರ ವಿಭಾಗದ ಸಂಶೋಧಕ ಇರ್ಮಾಕ್ ಅಲ್ಕೇಸೊಯ್‌ ಒಕ್ಟೆನ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...