ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆಂದು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ನ್ಯೂಯಾರ್ಕ್ ವಿವಿ ಹಾಗೂ ಯೇಲ್ ವಿವಿಗಳು ನಡೆಸಿದ ಅಧ್ಯಯನವೊಂದನ್ನು Behavioral Science & Policy ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಸೋಂಕು ಪಸರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ವಿಚಾರದಲ್ಲಿ ಮುಂದಿರುವುದಲ್ಲದೇ, ಈ ಕುರಿತಂತೆ ತಜ್ಞರು ನೀಡುವ ಸಲಹೆಗಳ ಪಾಲನೆ ಮಾಡುವುದರಲ್ಲೂ ಸಹ ಮಹಿಳೆಯರು ಮುಂದಿದ್ದಾರೆ ಎಂದು ಇದೇ ಅಧ್ಯಯನ ತಿಳಿಸುತ್ತದೆ.
ಕೋವಿಡ್-19ಗೆ ಚಿಕಿತ್ಸೆ ಪಡೆಯಲು ಪುರುಷರಿಗಿಂತ ಮಹಿಳೆಯರು ಅತ್ಯಂತ ಹೆಚ್ಚಾಗಿ ವೈದ್ಯರ ಬಳಿ ತೆರಳಿದ್ದಾಗಿಯೂ, ಅವರ ಸಲಹೆಗಳನ್ನು ಹೆಚ್ಚಾಗಿ ಪಾಲಿಸಿದ್ದಾಗಿಯೂ ನ್ಯೂಯಾರ್ಕ್ ವಿವಿಯ ಮನಶಾಸ್ತ್ರ ವಿಭಾಗದ ಸಂಶೋಧಕ ಇರ್ಮಾಕ್ ಅಲ್ಕೇಸೊಯ್ ಒಕ್ಟೆನ್ ತಿಳಿಸಿದ್ದಾರೆ.