alex Certify ಯುವತಿಯ ವರ್ಕೌಟ್‌ ಅಸಲಿಯತ್ತು ಬಯಲು ಮಾಡಿದ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯ ವರ್ಕೌಟ್‌ ಅಸಲಿಯತ್ತು ಬಯಲು ಮಾಡಿದ ಶ್ವಾನ…!

ವ್ಯಾಯಾಮ ಮಾಡುವ ಯುವತಿಯೊಬ್ಬಳ ಅಸಲಿಯತ್ತನ್ನು ಅವರ ಮನೆಯ ನಾಯಿಯೇ ಬಯಲು ಮಾಡಿದೆ. ವರ್ಕೌಟ್ ಕುರಿತಾದ ಮೋಜಿನ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತಾನು ಗೋಡೆಗೆ ಒರಗಿ ತಲೆ ಕೆಳಗಾಗಿ ಕೈ ಮೇಲೆ ನಿಂತು ವರ್ಕೌಟ್ ಮಾಡುತ್ತಿದ್ದೇನೆ ಎಂದು ಕಾಣುವಂತೆ ಯುವತಿಯೊಬ್ಬಳು ವಿಡಿಯೋ ಮಾಡಿದ್ದಾಳೆ. ಪಕ್ಕದಲ್ಲಿ ವೃದ್ಧನೊಬ್ಬ ಸ್ಟೂಲ್ ಮೇಲೆ ಕುಳಿತು ಪೇಪರ್ ಓದುವಂತೆ ಕಾಣುತ್ತದೆ. ಆದರೆ, ಇದೆಲ್ಲ ಕೆಲ ಹೊತ್ತು ಮಾತ್ರ. ಮನೆಯ ನಾಯಿ ಸಹಜವಾಗಿ ನಡೆದು ಬಂದು ತನ್ನ ಮಾಲೀಕನ ಪಕ್ಕ ಮಲಗುತ್ತದೆ.

ನೆಲದ ಮೇಲೆ ಮಲಗಿ ಸುಲಭದ ವರ್ಕೌಟ್ ಮಾಡಿ ಅದನ್ನು ತಲೆಕೆಳಗಾಗಿ ನಿಂತು ಮಾಡಿದಂತೆ ಕಾಣಬೇಕು ಎಂದು ಚಿತ್ರಿಸಲು ಹೊರಟ ಯುವತಿಯ ಅಸಲಿಯತ್ತು ಬಯಲಾಗಿದೆ. ಈ ವಿಡಿಯೋವನ್ನು 2.2 ಲಕ್ಷ ನೆಟ್ಟಿಗರು ಶೇರ್ ಮಾಡಿದ್ದು, 47 ಸಾವಿರ ಜನ ಲೈಕ್ ಒತ್ತಿದ್ದಾರೆ.

Tava tudo indo bem, até o cachorro estragar tudo

Posted by Paulinho Martins on Tuesday, April 14, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...