alex Certify ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ವೈರಲ್

ಬ್ರೆಜಿಲ್ ಮೂಲದ ಕಲಾವಿದನಿಗೆ ಮಹಿಳೆಯೊಬ್ಬಳು ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿ, ಆತನ ಅರ್ಟ್‌ವರ್ಕ್‌ನ್ನು ಧ್ವಂಸ ಮಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ.

ಹೌದು, ಈ ‌ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರೆಜಿಲ್ ಮೂಲದ ರೊಮಿರಿಯೊ ಬ್ರಿಟ್ಟೋ ಎನ್ನುವ ಕಲಾವಿದನ ಮೇಲೆ ಹೊಟೇಲ್ ಮಾಲಕಿ ಒಬ್ಬರು ತಮ್ಮ ಹೋಟೆಲ್‌ ಸಿಬ್ಬಂದಿಗಳಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಸುಮಾರು 4 ಲಕ್ಷ ಮೌಲ್ಯದ ಆರ್ಟ್‌ವರ್ಕ್ ಒಂದನ್ನು ಒಡೆದು ಹಾಕಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ ಈ ಘಟನೆ 2017ರಲ್ಲಿ ನಡೆದಿದ್ದು, ರೊಮಿರಿಯೋ ತಮ್ಮ ಸ್ನೇಹಿತರೊಂದಿಗೆ ಹೋಟೆಲ್ ‌ಗೆ ಹೋಗಿ, ಅಲ್ಲಿ ಎಂಟು ಜನರಿಗೆ ಆಹಾರ ಹೇಳಿದ್ದಾರೆ. ಆದರೆ ಬಳಿಕ ರಿಯಾಯಿತಿ‌ ನೀಡುವಂತೆ, ಮಾತನಾಡದಂತೆ ಒತ್ತಾಯಿಸಿದ್ದಾರೆ. ಈ ರೀತಿ ಮಾಡಿ ತನ್ನ ಸಿಬ್ಬಂದಿಗೆ ಅವಮಾನಿಸಿದ್ದಾರೆ ಎಂದು‌ ಮಹಿಳೆ ಆರೋಪಿಸಿದ್ದಾಳೆ. ಇದೀಗ ಈ ವಿಡಿಯೋ ‌ವೈರಲ್ ಆಗಿದ್ದು, ಸುಮಾರು 6.7 ಲಕ್ಷ‌ ಮಂದಿ ವೀಕ್ಷಿಸಿದ್ದಾರೆ. ಆದರೆ ಈ ರೀತಿ ಒಂದು ಕಡೆ ವಾದವನ್ನು ಮಾತ್ರ ಕೇಳುತ್ತಿರುವ ನೆಟ್ಟಿಗರ ವಿರುದ್ಧ ಕಲಾವಿದ ರೊಮಿಯೊ ಬೇಸರ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...