alex Certify ಘೋರ ದೃಶ್ಯ ಕಂಡು ಬೆಚ್ಚಿಬಿದ್ದ ಜನ: ಗೆಳೆಯನ ತಲೆ ಕಡಿದು ಬ್ಯಾಗ್ ನಲ್ಲಿ ಹೊತ್ತೊಯ್ಯುತ್ತಿದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಘೋರ ದೃಶ್ಯ ಕಂಡು ಬೆಚ್ಚಿಬಿದ್ದ ಜನ: ಗೆಳೆಯನ ತಲೆ ಕಡಿದು ಬ್ಯಾಗ್ ನಲ್ಲಿ ಹೊತ್ತೊಯ್ಯುತ್ತಿದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

 

ಅಮೆರಿಕದ ಸೆಂಟ್ರಲ್ ಮೆಕ್ಸಿಕೋದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ ಮಹಿಳೆಯೊಬ್ಬಳು ತನ್ನ ಹಿರಿಯ ಗೆಳೆಯನ ತಲೆಯನ್ನು ಕಡಿದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ತೆರಳಿದ್ದಾಳೆ. ಇದನ್ನು ಗಮನಿಸಿದವರು ಮಹಿಳೆಯ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದೆ.

ಪೈಶಾಚಿಕ ವಿಧಿವಿಧಾನ ಆಚರಣೆಯ ಭಾಗವಾಗಿ 35 ವರ್ಷದ ಮಹಿಳೆ ಈ ಕೃತ್ಯವೆಸಗಿದ್ದಾಳೆ. ಉದ್ರಿಕ್ತರ ಗುಂಪು ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸಿದ ನಂತರ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮೇರಿಕಾದ ಮೆಕ್ಸಿಕೋ ಪುರಸಭೆಯ ಅಮೆಕಾಮೇಕಾ ಸ್ಯಾಂಟಿಯಾಗೋ ಕ್ಯುಹೆಂಯ್ಟೆಂಕೊ ಎಂಬ ಪಟ್ಟಣದಲ್ಲಿ ವೆರೋನಿಕಾ ರಿವೆರಾ ಎಂಬ ಮಹಿಳೆ ಇಂತಹ ಕೃತ್ಯವೆಸಗಿದ್ದಾಳೆ. ಗೆಳೆಯ 70 ವರ್ಷದ ಜಾರ್ಜ್ ರಾಮೋಸ್ ನನ್ನು ಹರಿತವಾದ ಚಾಕುವಿನಿಂದ ಹತ್ಯೆ ಮಾಡಿದ ವೆರೋನಿಕಾ ತಲೆಯನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಅಲ್ಲಿಂದ ತೆರಳಿದ್ದಾಳೆ. ಈ ವೇಳೆ ಆಕೆ ಗಾಬರಿಯಿಂದ ಹೋಗುವುದನ್ನು ಗಮನಿಸಿದವರು ಮಾತನಾಡಿಸಿದಾಗ ಬ್ಯಾಗ್ ಕೆಳಗೆ ಬಿದ್ದಿದೆ. ಸ್ಥಳೀಯರು ಅದನ್ನು ಗಮನಿಸಿದಾಗ ತಲೆ ಇರುವುದು ಕಂಡುಬಂದಿದೆ. ಜನ ಆಕೆಯನ್ನು ಥಳಿಸಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.

Woman beaten after carrying boyfriend's HEAD after killing him ...

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...