alex Certify ಮಲಸಹೋದರನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಸಹೋದರನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ..!

ಕಳೆದ ಅನೇಕ ವರ್ಷಗಳ ಹಿಂದೆಯೇ ನನಗೆ ನಿನ್ನ ಮೇಲೆ ಪ್ರೇಮಾಂಕುರವಾಗಿತ್ತು ಎಂದು ಒಪ್ಪಿಕೊಳ್ಳುವ ಮೂಲಕ ಯುವತಿಯೊಬ್ಬಳು ತನ್ನ ಮಲಸಹೋದರನ ಜೊತೆಯೇ ಡೇಟಿಂಗ್​ ಮಾಡಲು ಆರಂಭಿಸಿದ ಅಪರೂಪದ ಘಟನೆಯೊಂದು ನಡೆದಿದೆ. ಸಿಕ್ರೇಟ್​ ಕ್ರಶ್​ ಎಂಬ ಶೋ ಒಂದರಲ್ಲಿ ಯುವತಿ ತನ್ನ ಪ್ರೀತಿಯನ್ನ ಬಹಿರಂಗಪಡಿಸಿದ್ದಾಳೆ.

ಮ್ಯಾಡಿ ಎಂಬ ಯುವತಿ ಬಾಲ್ಯದಿಂದಲೇ ಕ್ಯಾಲಮ್​ ಎಂಬ ಯುವಕನ ಜೊತೆ ಪರಿಚಯ ಹೊಂದಿದ್ದಳು. ಅಂದಹಾಗೆ ಮ್ಯಾಡಿಯ ತಾಯಿ ಹಾಗೂ ಕ್ಯಾಲಂ ತಂದೆ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸಿದ್ದರು. ಆದರೆ ಇವರಿಬ್ಬರ ಸಂಬಂಧ ಹೆಚ್ಚು ದಿನ ಮುಂದುವರಿಯಲಿಲ್ಲ.

ಇದಾದ ಬಳಿಕ ಮ್ಯಾಡಿ ಹಾಗೂ ಕ್ಯಾಲಂ ಸೋಶಿಯಲ್​ ಮೀಡಿಯಾದಲ್ಲಿ ಸಂಪರ್ಕ ಹೊಂದಿದ್ದರು. ದೊಡ್ಡವನಾದ ಮೇಲೆ ಕ್ಯಾಲಂ ಬಹಳ ಸ್ಪುರದ್ರೂಪಿಯಾಗಿಯೂ ಹಾಗೂ ಒಳ್ಳೆಯ ವ್ಯಕ್ತಿತ್ವದವನಾಗಿಯೂ ಬೆಳೆದಿದ್ದ. ಇವರಿಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಭೇಟಿಯಾಗದೇ 9 ವರ್ಷಗಳೇ ಕಳೆದಿತ್ತು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಕ್ಯಾಲಂ ಜೊತೆ ಸಂಪರ್ಕ ಹೊಂದಿದ್ದ ಮ್ಯಾಡಿಗೆ ಆತನ ಮೇಲೆ ಒಲವು ಮೊಳಕೆಯೊಡೆದಿತ್ತು.

ಮ್ಯಾಡಿ ಈ ರೀತಿ ಶೋನಲ್ಲಿ ಈ ಎಲ್ಲಾ ಕತೆಯನ್ನ ಹೇಳುತ್ತಿದ್ದಂತೆಯೇ ಕ್ಯಾಲಂ ಶಾಕ್​ಗೊಳಗಾಗಿದ್ದಾನೆ. ನಿನಗೆ ನನ್ನ ಮೇಲೆ ಪ್ರೀತಿ ಹುಟ್ಟಬಹುದು ಎಂದು ನಾನು ಭಾವಿಸಿಯೇ ಇರಲಿಲ್ಲ. ನೀನು ಇದನ್ನ ರಹಸ್ಯವಾಗಿ ಇಟ್ಟಿದ್ದೆ ಎಂದು ಹೇಳಿದ್ದಾನೆ.

ಇವರಿಬ್ಬರ ಪೋಷಕರು ಪರಸ್ಪರ ಪ್ರೀತಿಸಿದ್ದರೇ ವಿನಃ ಮದುವೆಯಾಗಿರಲಿಲ್ಲ. ಹೀಗಾಗಿ ಇವರಿಬ್ಬರೂ ಕಾನೂನಾತ್ಮಕವಾಗಿ ಸಹೋದರ – ಸಹೋದರಿ ಆಗಿರಲಿಲ್ಲ.

ಮ್ಯಾಡಿ ಕ್ಯಾಲಂ ಬಳಿಯಲ್ಲಿ ನಿಮ್ಮ ತಂದೆ ಇದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ಕೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಕ್ಯಾಲಂ, ನನ್ನ ಪ್ರಕಾರ ನನ್ನ ತಂದೆ ಮೂಕವಿಸ್ಮಿತರಾಗಬಹುದು. ಆದರೆ ಇವಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳೋದಿಲ್ಲ. ಏಕೆಂದರೆ ಇದು ಕೇವಲ ನನ್ನ ಹಾಗೂ ನಿನ್ನ ನಡುವಿನ ವಿಚಾರ ಎಂದು ಹೇಳಿದ್ದಾನೆ.

ಮ್ಯಾಡಿ ಪ್ರೀತಿಯನ್ನ ಒಪ್ಪಿಕೊಂಡಿರುವ ಕ್ಯಾಲಂ ಇದೀಗ ಮ್ಯಾಡಿ ತಾಯಿಯ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನ ತಿಳಿದುಕೊಳ್ಳಲು ಕಾತುರನಾಗಿದ್ದಾನೆ. ಮ್ಯಾಡಿ ಕೂಡ ಕ್ಯಾಲಂನನ್ನ ಆದಷ್ಟು ಬೇಗ ತಾಯಿಗೆ ಪರಿಚಯಿಸುವ ಉತ್ಸಾಹದಲ್ಲಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...