alex Certify ಸುಂದರ ಯುವತಿಯ ಫೋಟೋ ಕೇಳಿದವನು ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ ಯುವತಿಯ ಫೋಟೋ ಕೇಳಿದವನು ಮಾಡಿದ್ದೇನು ಗೊತ್ತಾ….?

ನಿಮ್ಮ ಕೇಶವನ್ನ ವಿನ್ಯಾಸಗೊಳಿಸಿದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ನಿಮ್ಮ ಫೋಟೋ ಕೇಳಿದ್ರು ಅಂದರೆ ಖಂಡಿತವಾಗಿಯೂ ನೀವು ಖುಷ್​ ಆಗ್ತೀರಾ..! ಇದೇ ರೀತಿ ಟಿಕ್​ಟಾಕ್​ ಬಳಕೆದಾರರೊಬ್ಬರಿಗೆ ಕೇಶ ವಿನ್ಯಾಸಕ ಫೋಟೋ ಕೇಳಿದ್ದು ಮುಂದೆ ನಡೆದ ಘಟನೆ ಸಖತ್​ ಫನ್ನಿಯಾಗಿದೆ.

ಆಕೆಯ ಫೋಟೋವನ್ನ ಕೇಶ ವಿನ್ಯಾಸಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಈ ಫೋಟೋವನ್ನ ನೋಡಿ ಯುವತಿ ಶಾಕ್​ ಆಗಿದ್ದಾರೆ. ಏಕೆಂದರೆ ಆ ಫೋಟೋವನ್ನ ಸಂಪೂರ್ಣ ಎಡಿಟ್​ ಮಾಡಲಾಗಿದೆ.

ಮದುವೆ ಕಾರ್ಯಕ್ಕೂ ರಜೆ ಸಿಗದ ಹಿನ್ನೆಲೆ: ಠಾಣೆಯಲ್ಲೇ ಅರಿಶಿಣ ಶಾಸ್ತ್ರ ಪೂರೈಸಿದ ಮಹಿಳಾ ಪೇದೆ..!

ತಾನು ಕಳುಹಿಸಿದ ಫೋಟೊ ಹಾಗೂ ಕೇಶ ವಿನ್ಯಾಸಕ ಎಡಿಟ್​ ಮಾಡಿದ ಫೋಟೋಗಳೆರಡನ್ನೂ ಯುವತಿ ಟಿಕ್​ಟಾಕ್​ನಲ್ಲಿ ಶೇರ್​ ಮಾಡಿದ್ದಾಳೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದ್ದು 1.2 ಮಿಲಿಯನ್​ಗೂ ಅಧಿಕ ಲೈಕ್ಸ್ ಸಂಪಾದಿಸಿದೆ.

ಅನೇಕರು ಕೇಶ ವಿನ್ಯಾಸಕನ ಈ ಎಡಿಟೆಡ್ ಫೋಟೋ ಕಂಡು ಮೂಗು ಮುರಿದಿದ್ದಾರೆ. ಫೋಟೋ ಎಡಿಟ್​ ಮಾಡುವ ಅವಶ್ಯಕತೆಯೇ ಇರಲಿಲ್ಲ. ನಮ್ಮ ನಿಜ ರೂಪಕ್ಕೆ ಹಿನ್ನಡೆ ಉಂಟುಮಾಡುವ ಇಂತಹ ವರ್ತನೆಯನ್ನ ಪೋಷಿಸಲೇಬಾರದು. ಮುಂದಿನ ಬಾರಿ ನಿಮ್ಮ ಕೇಶ ವಿನ್ಯಾಸಕನನ್ನ ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...