alex Certify ಆಟಿಕೆ ಕಾರಿಗೆ ಲೈಸೆನ್ಸ್‌ ಕೇಳಿದ ಹಿರಿಯ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಿಕೆ ಕಾರಿಗೆ ಲೈಸೆನ್ಸ್‌ ಕೇಳಿದ ಹಿರಿಯ ಮಹಿಳೆ…!

ಕ್ಯಾಲಿಫೋರ್ನಿಯಾ: ಪಾರ್ಕ್ ನಲ್ಲಿ ಮಕ್ಕಳು ಕಾರು ಓಡಿಸಲು ಅನುವು ಮಾಡಿಕೊಟ್ಟ ತಾಯಿಗೆ ಹಿರಿಯ ಮಹಿಳೆಯೊಬ್ಬರು ಬಯ್ಯುವ ವಿಡಿಯೋ ವೈರಲ್ ಆಗಿದೆ.

ಕ್ಯಾಲಿಫೋರ್ನಿಯಾ ಪಾರ್ಕ್ ಒಂದರಲ್ಲಿ ನಡೆದ ಘಟನೆ ಇದಾಗಿದ್ದು, @luna4boys04 ಟಿಕ್ ಟಾಕ್ ಖಾತೆಯಲ್ಲಿ ಅಪ್‌ಲೋಡ್ ಆಗಿದೆ.
“ಲೈಸನ್ಸ್ ಇಲ್ಲದೇ ಎಲ್ಲೆಂದರಲ್ಲಿ ಕಾರು ಓಡಿಸುತ್ತಿದ್ದಾರೆ. ನೀನೂ ಅವರ ಜತೆ ಇಲ್ಲ. ಹಿಂದೆಂದೂ ಈ ಪಾರ್ಕ್ ನಲ್ಲಿ ಕಾರು ಬಂದಿದ್ದು ನೋಡಿಲ್ಲ” ಎಂದು ಮಹಿಳೆ ಆಕ್ಷೇಪ ವ್ಯಕ್ತಪಡಿಸುತ್ತಾಳೆ.

ಆದರೆ, ಪ್ರತ್ಯುತ್ತರ ನೀಡುವ ತಾಯಿ ” ಪಾರ್ಕ್ ಇರುವುದೇ ಮಕ್ಕಳ ಆಟಕ್ಕೆ‌, ಅದು ನಿಜವಾದ ಕಾರಲ್ಲ ಪವರ್ ವೀಲರ್ ಆಟಿಕೆ‌ ಕಾರು” ಎನ್ನುತ್ತಾರೆ.
ಜಗಳದ ವಿಡಿಯೋವನ್ನು 1.8 ಮಿಲಿಯನ್ ಜನ ವೀಕ್ಷಿಸಿದ್ದು, 2.5 ಲಕ್ಷ ಜನ ಇಷ್ಟಪಟ್ಟಿದ್ದಾರೆ. 12 ಸಾವಿರದಷ್ಟು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...