alex Certify ಮಹಿಳಾ ಟಿಕ್​ಟಾಕರ್​ನ್ನು ಅಪಾಯದಿಂದ ಪಾರು ಮಾಡಿದ ಫಾಲೋವರ್ಸ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಟಿಕ್​ಟಾಕರ್​ನ್ನು ಅಪಾಯದಿಂದ ಪಾರು ಮಾಡಿದ ಫಾಲೋವರ್ಸ್.​..!

ಒಂದಿಲ್ಲೊಂದು ವಿಚಾರಗಳಿಂದ ಚೀನಾ ಮೂಲದ ಟಿಕ್​ಟಾಕ್​ ಅಪ್ಲಿಕೇಶನ್​ ಸುದ್ದಿ ಮಾಡ್ತಾನೇ ಇರುತ್ತೆ. ಟಿಕ್​ಟಾಕ್​​ನ ಪರ ಹಾಗೂ ವಿರುದ್ಧದ ಚರ್ಚೆಗಳು ನಡೀತಾನೇ ಇರುತ್ತವೆ. ಈಗ ಭಾರತದಲ್ಲಿ ಟಿಕ್​ಟಾಕ್​ ಬ್ಯಾನ್​ ಆಗಿರೋದು ಕೂಡ ಎಲ್ಲರಿಗೂ ತಿಳಿದಿರುವ ವಿಚಾರ.

ಟಿಕ್​ಟಾಕ್​ನಲ್ಲಿ ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಜೀವಕ್ಕೆ ಅಪಾಯ ಮಾಡಿಕೊಳ್ಳೋದ್ರಿಂದ ಪಾರಾಗಿದ್ದಾರೆ. ಹಿಮದ ಮೇಲೆ ಬರೆಯಲಾಗಿದ್ದ ಡೇಂಜರ್​ ಚಿಹ್ನೆಯ ಬಗ್ಗೆ ಫಾಲೋವರ್ಸ್​ ಮನವರಿಕೆ ಮಾಡಿಕೊಟ್ಟಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಕೆನಡಾದ ನ್ಯೂಫೌಂಡ್​ಲ್ಯಾಂಡ್​ನಲ್ಲಿ 27 ವರ್ಷದ ಜೇಡ್​ ಜೂಲ್ಸ್ ಟಿಕ್​ಟಾಕ್​ ಮಾಡುತ್ತಿದ್ದ ಸ್ಥಳದಲ್ಲಿ 1 ಎಫ್​ ಎಂದು ಬರೆಯಲಾಗಿತ್ತು. ಇದರ ಬಗ್ಗೆ ಅರಿವಿಲ್ಲದ ಜೂಲ್ಸ್ ವಿಡಿಯೋವನ್ನ ಟಿಕ್​ಟಾಕ್​ನಲ್ಲಿ ಅಪ್​ಲೋಡ್​ ಮಾಡಿದ್ದರು. ಅಲ್ಲದೇ ಈ ಚಿಹ್ನೆ ಬಗ್ಗೆ ಯಾರಾದರೂ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದಳು. ಆದರೆ ಅನೇಕರ ಅನುಯಾಯಿಗಳು ಎಫ್​ 1 ಎಂಬುದು ನೊಟೋರಿಯಸ್​ ಗ್ಯಾಂಗ್​​ನ ಚಿಹ್ನೆಯಾಗಿದೆ ಎಂದು ಹೇಳುತ್ತಿದ್ದಂತೆಯೇ ಮಹಿಳಾ ಟಿಕ್​ಟಾಕರ್​ ಗಾಬರಿಗೊಳಗಾಗಿದ್ದಾರೆ.

ಆದರೆ ತಜ್ಞರ ಮಾಹಿತಿ ಪ್ರಕಾರ ಅತ್ಯಾಚಾರ, ಕಳ್ಳತನದಂತಹ ಅಪರಾಧ ಕೃತ್ಯಗಳಿಗೆ ಬಹುಬೇಗ ಸಂತ್ರಸ್ತರು ಟಾರ್ಗೆಟ್​ ಆಗುವ ಜಾಗವಿದು ಎಂಬರ್ಥವನ್ನ ಈ ಚಿಹ್ನೆ ನೀಡುತ್ತದೆಯಂತೆ . ಟಿಕ್​ಟಾಕ್​​ ಫಾಲೋವರ್ಸ್​ನಿಂದ ಮಾಹಿತಿ ಸಿಗುತ್ತಿದ್ದಂತೆಯೇ ಮಹಿಳೆ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...