alex Certify ಹಣ ಗೆದ್ದು ಭವಿಷ್ಯ ಸುಳ್ಳಾಗಿಸಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಗೆದ್ದು ಭವಿಷ್ಯ ಸುಳ್ಳಾಗಿಸಿದ ಮಹಿಳೆ…!

ನೀನು ಜೀವನದಲ್ಲಿ ಏನನ್ನೂ ಗೆಲ್ಲಲಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ಹೇಳಿದ್ದರಂತೆ.

ಆದರೆ, ಆಕೆ ಈಗ 1,02,000 ಆಸ್ಟ್ರೇಲಿಯನ್ ಡಾಲರ್ ಅಂದರೆ 53.4 ಲಕ್ಷ ರೂ. ಜಾಕ್ ಪಾಟ್ ಗೆದ್ದಿದ್ದಾರೆ.

ಈ ಮೂಲಕ ವರ್ಷದ ಹಿಂದೆ ತಾವು ಕೇಳಿದ್ದ ಭವಿಷ್ಯವಾಣಿಯನ್ನು ಸುಳ್ಳಾಗಿಸಿದ್ದಾರೆ.

ಆಸ್ಟ್ರೇಲಿಯಾದ ವೋಯ್ ವೋಯ್ ನಗರದ ಮಹಿಳೆಯೊಬ್ಬರು ಒಂದು ವರ್ಷದ ಹಿಂದೆ ಭವಿಷ್ಯ ಕೇಳಿದ್ದಾಗ, ಜೀವನದಲ್ಲಿ ಏನನ್ನೂ ಗೆಲ್ಲಲಾರೆ ನೀನು.‌ ಗೆಲ್ಲುವ ಆಸೆಗಳನ್ನು ಬಿಟ್ಟು ಬದುಕು ಎಂದಿದ್ದರಂತೆ.

ಇದನ್ನು ನಂಬದ ಆಕೆ, ನಾನು ಗೆದ್ದೇ ಗೆಲ್ಲುತ್ತೇನೆ ಎಂದು ನಿಶ್ಚಯಿಸಿದರಂತೆ. ಇತ್ತೀಚೆಗೆ ಒಂದು ಲಾಟರಿ ಟಿಕೆಟ್ ಸಹ ಕೊಂಡಿದ್ದರಂತೆ. ಅನಿರೀಕ್ಷಿತವಾಗಿ ಲಾಟರಿ ಅಧಿಕಾರಿಗಳು ಫೋನ್ ಕರೆ ಮಾಡಿ ಜಾಕ್ ಪಾಟ್ ಹೊಡೆದಿರುವ ಬಗ್ಗೆ ಮಾಹಿತಿ ನೀಡಿದರಂತೆ. ಇದನ್ನು ಕೇಳಿ ಖುಷಿಯಾದ ಮಹಿಳೆ, ಭವಿಷ್ಯವಾಣಿ ಸುಳ್ಳು ಮಾಡಲು ಇಷ್ಟು ದಿನ ನಡೆಸಿದ ಪ್ರಯತ್ನ ಈಗ ಫಲ ಕೊಟ್ಟಿದೆ. ನಾನು ಗೆದ್ದೆ ಎಂದು ಬೀಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...