alex Certify ಸಮಾಧಿ ಮೇಲೆ ಮಿಠಾಯಿ ಮಾಡುವ ವಿಧಾನ ಕೆತ್ತನೆ..! ಫೋಟೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಾಧಿ ಮೇಲೆ ಮಿಠಾಯಿ ಮಾಡುವ ವಿಧಾನ ಕೆತ್ತನೆ..! ಫೋಟೋ ವೈರಲ್​

ನೀವು ಯಾವುದಾದರೂ ತಿನಿಸುಗಳನ್ನ ತಯಾರಿಸೋದ್ರಲ್ಲಿ ಫೇಮಸ್​ ಇದ್ದೀರಾ ಅಂದರೆ ಮನೆಗೆ ಅತಿಥಿಗಳು ಬಂದಾಗ ಆ ಖಾದ್ಯ ಖಾಯಂ ಸ್ಥಾನವನ್ನ ಪಡೆಯೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ತಾನು ಅತ್ಯಂತ ಚೆನ್ನಾಗಿ ತಯಾರಿಸುವ ಮಿಠಾಯಿ ಮೇಲೆ ಎಷ್ಟು ಪ್ರೀತಿಯನ್ನ ಹೊಂದಿದ್ದಳು ಅಂದರೆ ಇದೀಗ ಆಕೆಯ ಮರಣಾನಂತರ ಸಮಾಧಿಯ ಮೇಲೆ ಮಿಠಾಯಿ ಮಾಡುವ ವಿಧಾನವನ್ನ ಕೆತ್ತಲಾಗಿದೆ.

ಕತ್ರೈನ್​​ ಆಂಡ್ರಿವ್ಸ್ ಎಂಬಾಕೆಯನ್ನು ಆಕೆ ಪತಿಯ ಸಮಾಧಿಯ ಜೊತೆಯಲ್ಲಿ ಹೂಳಲಾಗಿದ್ದು ಉತಾಹ್​ದ ಈ ಮಹಿಳೆಯ ಸಮಾಧಿಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಈಕೆಯ ಸಮಾಧಿಯ ಮೇಲೆ ಜನನ ಹಾಗೂ ಮರಣದ ದಿನಾಂಕದ ಜೊತೆಯಲ್ಲಿ ಇನ್ನೂ ಕೆಲ ವಿಶೇಷ ಬರಹವನ್ನ ಬರೆಯಲಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಆಂಡ್ರಿವ್ಸ್ ಪುತ್ರಿ ಜ್ಯಾನಿಸ್​ ಜಾನ್ಸನ್​ ಜನರನ್ನ ತುಂಬಾ ಹಚ್ಚಿಕೊಳ್ತಿದ್ದ ನನ್ನ ತಾಯಿ ಮನೆಗೆ ಯಾರೇ ಬಂದರೂ ಸಹ ಅವರಿಗೆ ಈ ಮಿಠಾಯಿಯನ್ನ ತಯಾರಿಸಿ ನೀಡುತ್ತಿದ್ದಳು. ವೇಡ್​ ಎಂಬವರನ್ನ ಪ್ರೀತಿಸಿದ್ದ ಆಂಡ್ರಿವ್ಸ್ 1944 ಡಿಸೆಂಬರ್​ 18ರಲ್ಲಿ 2ನೇ ವಿಶ್ವಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಳು.

ವೇಡ್​ ಅಮೆರಿಕದ ವಾಯುನೆಲೆಯ ಕ್ಯಾಪ್ಟನ್​ ಆಗಿದ್ದರು. 2000ದಲ್ಲಿ ವೇಡ್​ ನಿಧನರಾದ್ರು. ಈ ವೇಳೆಯಲ್ಲಿ ಸಮಾಧಿಗೆ ಹಾಕಬಹುದಾದ ಪತಿಯ ಫೋಟೋಗಳನ್ನ ಈಕೆಯೇ ಆಯ್ಕೆ ಮಾಡಿದ್ರು.

2019ರಲ್ಲಿ ಆಂಡ್ರಿವ್​ ಕೂಡ ಸಾವನ್ನಪ್ಪಿದ್ದು ಆಕೆಯ ಸಮಾಧಿ ಮೇಲೆ ಚಾಕಲೇಟ್​ ಮಿಠಾಯಿ ಮಾಡುವ ವಿಧಾನ ಬರೆಯಲಾಗಿದೆ. ಮೊದಲು ಇದರಲ್ಲಿ 1 ಟೇಬಲ್​ ಸ್ಪೂನ್​ ವೆನಿಲ್ಲಾ ಎಂದು ಬರೆಯಲಾಗಿತ್ತು. ಅದನ್ನೀಗ ಸರಿಪಡಿಸಿ ಒಂದು ಟೀ ಸ್ಪೂನ್​ ವೆನಿಲ್ಲಾ ಎಂದು ಬರೆಯಲಾಗಿದೆ. ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...