alex Certify ಜೀವದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಫುಟ್ಬಾಲ್ ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಫುಟ್ಬಾಲ್ ಆಟಗಾರರು

ಅಮೆರಿಕಾದ ಉತಾಹ್ ‌ನಲ್ಲಿ ಯುವತಿಯೊಬ್ಬರನ್ನು ರಕ್ಷಿಸಲಾದ ವಿಡಿಯೋವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಪ್ರಪಾತವೊಂದರಿಂದ ರ‍್ಯಾಪೆಲಿಂಗ್ ಮಾಡುತ್ತಿದ್ದ ವೇಳೆ, ಆಕೆಯ ತಲೆಗೂದಲು ಹಗ್ಗಕ್ಕೆ ಸಿಲುಕಿಕೊಂಡು, ಆಕೆ ಅದಕ್ಕೆ ನೇತು ಹಾಕಿಕೊಂಡಿದ್ದರು.

ಹೆದ್ದಾರಿಯೊಂದರತ್ತ ಮುಖ ಮಾಡಿರುವ ಕೆಂಪು ಶಿಲೆಯೊಂದಕ್ಕೆ ನೇತು ಹಾಕಿಕೊಂಡಿದ್ದ ಯುವತಿಯನ್ನು ಕಂಡ ವಿವಿ ಕಾಲೇಜೊಂದರ ಫುಟ್ಬಾಲ್ ತಂಡದ ಆಟಗಾರರು, ಆಕೆಯನ್ನು ರಕ್ಷಿಸಿದ್ದಾರೆ.

ತಂಡದ ಒಂದು ಗುಂಪು ಶಿಲೆಯ ಕೆಳಗೆ ನಿಂತುಕೊಂಡು, ಒಂದು ವೇಳೆ ಆಕೆ ಆಯತಪ್ಪಿ ಕೆಳಗೆ ಬಿದ್ದರೆ ಹಿಡಿದುಕೊಳ್ಳಲು ನಿಂತರೆ ಮತ್ತೊಂದು ಗುಂಪು ಆ ಶಿಲೆ ಮೇಲೆ ನಿಂತುಕೊಂಡು, ಆಕೆಯನ್ನು ನಾಜೂಕಾಗಿ ಮೇಲೆತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...