alex Certify ತಲೆನೋವಿನ ಮಾತ್ರೆ ಖರೀದಿಸಲು ಹೋದ ವೃದ್ದೆಗೆ ಬಂತು ತಲೆ ತಿರುಗುವಷ್ಟು ಹಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆನೋವಿನ ಮಾತ್ರೆ ಖರೀದಿಸಲು ಹೋದ ವೃದ್ದೆಗೆ ಬಂತು ತಲೆ ತಿರುಗುವಷ್ಟು ಹಣ…!

ತಲೆನೋವಿನ ರೂಪದಲ್ಲೂ ಜನರಿಗೆ ಅದೃಷ್ಟ ಖುಲಾಯಿಸುತ್ತದೆ ಎಂದು ಯಾರಾದರೂ ಊಹಿಸಲಾದರೂ ಸಾಧ್ಯವೇ? ವರ್ಜೀನಿಯಾದ ಹೆನ್ರಿಕೋ ಎಂಬ ಊರಿನಲ್ಲಿ ಆಲ್ಗಾ ರಿಚಿ ಎಂಬ ಮಹಿಳೆಗೆ ಹೀಗೊಮ್ಮೆ ಅದೃಷ್ಟದ ಬಾಗಿಲು ತೆರೆದಿದೆ.

ತಲೆನೋವು ಬಂದ ಕಾರಣ ಇಲ್ಲಿನ ಟೋನೀಸ್ ಮಾರ್ಕೆಟ್‌ನಲ್ಲಿ ಮಾತ್ರೆಗಳನ್ನು ಖರೀದಿ ಮಾಡಲು ಹೋದ ಈಕೆಗೆ ಒಂದು ಸ್ಕ್ರಾಚ್ ಆಫ್ ಟಿಕೆಟ್‌ ಒಂದು ಸಿಕ್ಕಿದೆ. ಅದನ್ನು ಸ್ಕ್ರಾಚ್ ಮಾಡಿ ನೋಡಿದಾಗ ಅವರಿಗೆ ಅಚ್ಚರಿ ಕಾದಿತ್ತು.

ಲಾಟರಿ ಜಾಕ್‌ಪಾಟ್‌ನಲ್ಲಿ ಆಲ್ಗಾ $5,00,000 ಗಳನ್ನು ಗೆದ್ದಿದ್ದರು. ಗೆದ್ದ ಈ ಹಣದಲ್ಲಿ ತನ್ನ ಮನೆಗೆ ಕೆಲವೊಂದು ರಿಪೇರಿಗಳನ್ನು ಮಾಡಿ, ನಿವೃತ್ತ ಜೀವನ ಸಾಗಿಸಲು ಕೆಲವೊಂದು ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಚಿಂತಿಸುತ್ತಿರುವುದಾಗಿ ಆಲ್ಗಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...