alex Certify ಕಾರಿನಲ್ಲೇ ಪತ್ನಿಗೆ ಹೆರಿಗೆ ಮಾಡಿಸಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲೇ ಪತ್ನಿಗೆ ಹೆರಿಗೆ ಮಾಡಿಸಿದ ಪತಿ

ಪತ್ನಿಗೆ ಕಾರಿನಲ್ಲೇ ಪತಿ ಹೆರಿಗೆ ಮಾಡಿಸಿದ ಘಟನೆ ಇಂಗ್ಲೆಂಡ್ ನಲ್ಲಿ‌ ‌ನಡೆದಿದೆ. ಸೆನ್ಸಬರಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಹೆನ್ನಾ ಹೋವೆಲ್ಸ್ ಎಂಬ ಮಹಿಳೆ ಈಗ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿದ್ದ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರ ಪತಿ ಆ್ಯಂಡಿ ಕಾರಿನಲ್ಲಿ ಕರೆದುಕೊಂಡು ಆಸ್ಪತ್ರೆಗೆ ಹೊರಟಿದ್ದರು. ಆದರೆ ಇನ್ನೂ ಆಸ್ಪತ್ರೆ 2 ಕಿ.ಮೀ. ಇರುವಾಗಲೇ ಹೆನ್ನಾಗೆ ನೋವು ಹೆಚ್ಚಾಗಿದ್ದರಿಂದ ಅಲ್ಲೇ ಇದ್ದ ಒಂದು ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ, ಹೆದ್ದಾರಿಯಲ್ಲಿ ಬರುತ್ತಿದ್ದ ಆಂಬುಲೆನ್ಸ್ ಗೆ ಕೈ ಬೀಸಿದ್ದಾರೆ. ಆದರೆ, ಇವರು ತಮಗೆ ಶುಭ ಕೋರಲು ಕೈ ಮಾಡುತ್ತಿದ್ದಾರೆ ಎಂದು ತಪ್ಪು ತಿಳಿದ ಆಂಬುಲೆನ್ಸ್ ಚಾಲಕ ನಿಲ್ಲಿಸದೇ ಮುಂದೆ ಹೋಗಿದ್ದಾನೆ.

ಗಾಬರಿಗೊಂಡ ಪತಿ ಆ್ಯಂಡಿ ಹೆರಿಗೆ ತುರ್ತು ಚಿಕಿತ್ಸಾ ಘಟಕಕ್ಕೆ ಕರೆ ಮಾಡಿದ್ದಾರೆ. ಹೆರಿಗೆ ಮಾಡಿಸುವ ವಿಧಾನಗಳನ್ನು ತುರ್ತು ಚಿಕಿತ್ಸಾ ಘಟಕ ಸಿಬ್ಬಂದಿ ಆ್ಯಂಡಿ ಅವರಿಗೆ ಫೋನ್ ನಲ್ಲೆ ನೀಡಿದ್ದಾರೆ. ಅವರ ಸೂಚನೆಯಂತೆ ಪತಿ ತನ್ನ ಪತ್ನಿಗೆ ಕಾರಿನಲ್ಲೇ ಹೆರಿಗೆ ಮಾಡಿಸಿದ್ದಾರೆ. ಕೆಲವೇ ನಿಮಿಷದಲ್ಲಿ ಹೆನ್ನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಪಾರ್ಕಿಂಗ್ ಸ್ಥಳದಲ್ಲಿದ್ದ ಜನರು ಯಾವುದೇ ಸಹಾಯ ಮಾಡಲು ತಯಾರಿದ್ದರು. ಹೆರಿಗೆ ತುರ್ತು ಚಿಕಿತ್ಸಾ ಘಟಕದ ಸಿಬ್ಬಂದಿಯ ಸಹಾಯವೇ ಇದಕ್ಕೆ ಕಾರಣ ಎಂದು ಆ್ಯಂಡಿ ಹೇಳಿದ್ದಾರೆ. ನಾವು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದೆವು. ಆಸ್ಪತ್ರೆ ಸ್ವಲ್ಪ ದೂರದಲ್ಲಿದ್ದರೂ ನಮಗೆ ತಲುಪಲು ಆಗಲಿಲ್ಲ. ತುರ್ತು ಕರೆಯನ್ನು ಸ್ವೀಕರಿಸಿ ನಮಗೆ ಸಹಾಯ ಮಾಡಿದ ಸಿಬ್ಬಂದಿಗೆ ನಾವು ಯಾವಾಗಲೂ ಚಿರಋಣಿ ಎಂದು ಹೆನ್ನಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...