alex Certify ತನಗಿಷ್ಟ ಅಂತಾ ಸಾಕಿದ ಬೆಕ್ಕಿಗೆ ಟ್ಯಾಟೂ ಹಾಕಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನಗಿಷ್ಟ ಅಂತಾ ಸಾಕಿದ ಬೆಕ್ಕಿಗೆ ಟ್ಯಾಟೂ ಹಾಕಿಸಿದ ಮಹಿಳೆ

ಟ್ಯಾಟೂ ಹಾಕಿಕೊಳ್ಳುವ ಕ್ರೇಜ್​ ಇರುವವರು ತಮ್ಮ ಮೈ ತುಂಬಾ ತಮಗೆ ಬೇಕಾದ ರೀತಿಯಲ್ಲಿ ಟ್ಯಾಟೂಗಳನ್ನ ಹಾಕಿಕೊಂಡು ಸಂಭ್ರಮಿಸ್ತಾರೆ. ಆದರೆ ನಿಮಗೆ ಇಷ್ಟ ಅಂತಾ ನಿಮ್ಮ ಮನೆಯ ಸಾಕು ಪ್ರಾಣಿಗೆ ಟ್ಯಾಟೂ ಹಾಕಿಸಿದ್ರೆ ಅದು ಪ್ರಾಣಿ ಹಿಂಸೆಯ ಅಡಿಯಲ್ಲಿ ಬರುತ್ತದೆ.

ಕೆಲ ದಿನಗಳ ಹಿಂದಷ್ಟೇ ಉಕ್ರೇನಿಯಾದ ಮಹಿಳೆ ತಮ್ಮ ಪ್ರೀತಿಯ ಬೆಕ್ಕಿಗೆ ಟ್ಯಾಟೂ ಹಾಕಿಸುವ ಮೂಲಕ ಸೋಶಿಯಲ್​ ಮೀಡಿಯಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಲೆನಾ ಇವಾನಿಸ್ಕಾಯಾ ಎಂಬಾಕೆ ತನ್ನ ಕೂದಲಿಲ್ಲದ ಬೆಕ್ಕಿಗೆ ಈಜಿಪ್ಟ್​ ದೇವರಿಗೆ ಸಂಬಂಧಿಸಿದ ಚಿತ್ರವನ್ನ ಟ್ಯಾಟೂ ಹಾಕಿಸಿದ್ದಾಳೆ.

2017ರಲ್ಲಿ ಈ ರೀತಿ ಬೆಕ್ಕಿಗೆ ಟ್ಯಾಟೂ ಹಾಕಿಸಿದ್ದ ಈಕೆ ಇದೀಗ ಮತ್ತೊಮ್ಮೆ ಇನ್​ಸ್ಟಾಗ್ರಾಂನಲ್ಲಿ ಬೆಕ್ಕಿನ ಫೋಟೋ ಶೇರ್​ ಮಾಡಿದ್ದು ಪ್ರಾಣಿ ಪ್ರಿಯರು ಗರಂ ಆಗಿದ್ದಾರೆ. ಇದನ್ನ ನೋಡಿದ ನೆಟ್ಟಿಗರೊಬ್ಬರು ಅದು ಆಟದ ಸಾಮಗ್ರಿಯಲ್ಲ, ಅದು ಕೂಡ ಒಂದು ಜೀವಿ ಎಂಬುದು ನೆನಪಿರಲಿ ಅಂತಾ ಕಮೆಂಟ್​ ಹಾಕಿದ್ದಾರೆ.

ಇನ್ನೊಬ್ಬ ಇನ್​ಸ್ಟಾಗ್ರಾಂ ಬಳಕೆದಾರರು ನಿಮಗೆ ಬೇಕು ಅಂತಾ ಆಸೆ ಇದ್ದರೆ ನೀವು ಇಷ್ಟ ಬಂದಲ್ಲಿ ಟ್ಯಾಟೂ ಹಾಕಿಸಿಕೊಳ್ಳಿ. ಆದರೆ ಪ್ರಾಣಿಯ ಅಂದ ಹೆಚ್ಚಿಸೋಕೆ ಇಂತಹ ಕೃತ್ಯ ಮಾಡಬಾರದು. ನಮಗಿಂತ ಕಡಿಮೆ ಬಲವುಳ್ಳವರಿಗೆ ಹಿಂಸೆ ನೀಡೋದು ಮಹಾ ಅಪರಾಧ ಎಂದು ಅಭಿಪ್ರಾಯಪಟ್ಟಿದ್ದಾರೆ.

View this post on Instagram

A post shared by Elena Iwanickaya ??? (@elenaiwt)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...