alex Certify ರೈಲಿನಲ್ಲಿ ಕಳೆದುಕೊಂಡ ಲ್ಯಾಪ್‌ ಟಾಪ್‌ ಮರಳಿ ಸಿಕ್ತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಕಳೆದುಕೊಂಡ ಲ್ಯಾಪ್‌ ಟಾಪ್‌ ಮರಳಿ ಸಿಕ್ತು….!

ಸಾರ್ವಜನಿಕ ಸ್ಥಳಗಳಲ್ಲಿ ಎಂದಾದರೂ ನಿಮ್ಮ ಲ್ಯಾಪ್​ಟಾಪ್​ನ್ನು ಮರೆತು ತೆರಳಿದ್ದೀರಾ..? ಒಂದು ವೇಳೆ ಮರೆತೆವು ಅಂದರೂ ಸಹ ಅದು ವಾಪಾಸ್​ ಸಿಗೋದು ಭಾರೀ ಕಷ್ಟ. ಮೆಟ್ರೋದಲ್ಲಿ ಲ್ಯಾಪ್​ಟಾಪ್​ ಮರೆತು ಬಿಟ್ಟುಬಂದಿದ್ದ ಮಹಿಳೆಗೆ ಅಪರಿಚಿತ ಅದನ್ನ ಹಿಂದಿರುಗಿಸಿದ ಘಟನೆ ಬ್ರಿಟನ್​ನಲ್ಲಿ ವರದಿಯಾಗಿದೆ.

ಡೈಸಿ ಮೋರಿಸ್​ ಎಂಬಾಕೆ ಹೇಗೆ ಅಪರಿಚಿತ ವ್ಯಕ್ತಿ ಸೋಶಿಯಲ್​ ಮೀಡಿಯಾದ ಸಹಾಯದಿಂದ ತನ್ನನ್ನ ಹುಡುಕಿದ ಅನ್ನೋದನ್ನ ಲಿಂಕ್ಡಿನ್​​ನಲ್ಲಿ ಶೇರ್​ ಮಾಡಿದ್ದಾಳೆ.

ಮಹಿಳೆಯ ಸಂಪೂರ್ಣ ಉದ್ಯಮದ ಮಾಹಿತಿಯು ಲ್ಯಾಪ್​​ಟಾಪ್​ನಲ್ಲೇ ಇತ್ತು. ಹೀಗಾಗಿ ಆಕೆ ಕೂಡಲೇ ಟ್ರೇನ್​ ನಿರ್ವಾಹಕನ ಬಳಿಗೆ ಹೋಗಿ ಲ್ಯಾಪ್​ಟಾಪ್​ ಬಗ್ಗೆ ವಿಚಾರಿಸಿದ್ದಳು. ಆದರೆ ಕಂಡಕ್ಟರ್​ ಇದಕ್ಕೆ 7 ದಿನಗಳ ಸಮಯಾವಕಾಶ ಬೇಕು ಎಂದು ಕೇಳಿದ್ದರಂತೆ.

ಉದ್ಯಮವನ್ನ ಮುಂದುವರಿಸೋಕೆ ಲ್ಯಾಪ್​ಟಾಪ್​ ಅಗತ್ಯವಾಗಿ ಬೇಕಿದ್ದರಿಂದ ಮಹಿಳೆ ಹೊಸ ಲ್ಯಾಪ್​​ ಟಾಪ್​ ಖರೀದಿ ಮಾಡಲು ನಿರ್ಧರಿಸಿದ್ರು. ಈ ವೇಳೆ ಆಕೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ.

ಆದರೆ ಲ್ಯಾಪ್​ಟಾಪ್​ ಹಿಂದಿರುಗಿಸಿದ ವ್ಯಕ್ತಿ ಡೈಸಿಯಿಂದ ಯಾವುದೇ ಹಣವನ್ನ ಸ್ವೀಕರಿಸಲು ನಿರಾಕರಿಸಿದ್ದಾನೆ. ಹೀಗಾಗಿ ಆಕೆ ಆತನಿಗೆ ಕೊಡಬೇಕು ಎಂದುಕೊಂಡಿದ್ದ ಹಣವನ್ನ ಚಾರಿಟಿಯೊಂದಕ್ಕೆ ನೀಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...