alex Certify ಮನೆ ಮೌಲ್ಯ ಹೆಚ್ಚಳಕ್ಕೆ ಕಾರಣವಾಯ್ತು ರಾತ್ರೋರಾತ್ರಿ ಮೂಡಿದ ಪೇಂಟಿಂಗ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮೌಲ್ಯ ಹೆಚ್ಚಳಕ್ಕೆ ಕಾರಣವಾಯ್ತು ರಾತ್ರೋರಾತ್ರಿ ಮೂಡಿದ ಪೇಂಟಿಂಗ್…!

ಇಂಗ್ಲೆಂಡ್​ನ ಬ್ರಿಸ್ಟೋಲ್​ ಪಟ್ಟಣದಲ್ಲಿ ಮನೆಯ ಮಾರಾಟಕ್ಕೆ ನಿರ್ಧರಿಸಿದ್ದ ಮಹಿಳೆ ತನ್ನ ಮನೆಯ ಗೋಡೆಯಲ್ಲಿ ರಾತ್ರೋರಾತ್ರಿ ಬ್ಯಾಂಕ್ಸಿ ಆರ್ಟ್​ ಮೂಡುತ್ತಿದ್ದಂತಯೇ ತನ್ನ ನಿರ್ಧಾರವನ್ನ ಬದಲಿಸಿದ್ದಾಳೆ.

ಏಲಿಯನ್​ ಮಕೀನ್​ ಎಂಬ ಮಹಿಳೆ ತನ್ನ ಮನೆಯನ್ನ 3 ಕೋಟಿ ರೂಪಾಯಿಗೆ ಮಾರಾಟ ಮಾಡಲು ತಯಾರಿ ನಡೆಸಿದ್ದಳು. ಆದರೆ ರಾತ್ರೋ ರಾತ್ರಿ ಆಕೆಯ ಮನೆ ಮೇಲೆ ವೃದ್ಧೆಯೊಬ್ಬಳು ಸೀನುತ್ತಿರುವ ರೀತಿಯಲ್ಲಿ ಬ್ಯಾಂಕ್ಸಿ ಚಿತ್ರವನ್ನ ಮೂಡಿಸಲಾಗಿತ್ತು. ಈ ಅದ್ಭುತ ಚಿತ್ರವನ್ನ ನೋಡುತ್ತಿದ್ದಂತೆಯೇ ಆಕೆ ತನ್ನ ಮನೆಯ ಬೆಲೆಯನ್ನ 17 ಪಟ್ಟು ಏರಿಕೆ ಮಾಡಿದ್ದಾಳೆ ಎನ್ನಲಾಗಿದೆ.

ಹೆಸರಾಂತ ಬ್ಯಾಂಕ್ಸಿ ಕಲೆಗಾರ ಇದನ್ನ ತಾನೇ ಚಿತ್ರಿಸಿದ್ದು ಎಂದು ಒಪ್ಪಿಕೊಂಡಿದ್ದು ಇನ್ಸ್​ಟಾಗ್ರಾಂನಲ್ಲಿ ಈ ಫೋಟೋ ಶೇರ್​ ಮಾಡಿದ್ದಾನೆ. ಹಾಗೂ ಇದಕ್ಕೆ ಆಚೂ..! ಎಂದು ಕ್ಯಾಪ್ಶನ್​ ನೀಡಿದ್ದಾನೆ.

ಚಿತ್ರದಲ್ಲಿ ಬಾಗು ಬೆನ್ನಿನ ವೃದ್ಧೆ ಬಿಳ್ಳಿ ಬಣ್ಣದ ಸ್ಕಾರ್ಫ್​ನ್ನ ತಲೆಗೆ ಕಟ್ಟಿದ್ದಾಳೆ ಹಾಗೂ ಕಂದು ಬಣ್ಣದ ಕೋಟ್​ನ್ನ ಧರಿಸಿದ್ದಾಳೆ. ಕೈಯಲ್ಲಿ ಕರ್ಚೀಫ್​ ಹಿಡಿದ ವೃದ್ಧೆ ಸೀನುತ್ತಿದ್ದು ಆಕೆಯ ಬ್ಯಾಗ್​ ಹಾಗೂ ಊರುಗೋಲು ಕೈಯಿಂದ ಜಾರಿ ಬೀಳುತ್ತಿರುವ ರೀತಿಯಲ್ಲಿ ಗೋಡೆ ಬರಹವನ್ನ ಬಿಡಿಸಲಾಗಿದೆ.

ಏಲಿಯನ್​ ಆಸ್ತಿ ಇಂಗ್ಲೆಂಡ್​ ದುಬಾರಿ ಏರಿಯಾಗಳಲ್ಲೊಂದಾದ ವೇಲ್​ ಸ್ಟ್ರೀಟ್​ನಲ್ಲಿದೆ. ಈ ಗೋಡೆ ಬರಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದಂತೆ ಮನೆಗೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗಿದೆಯಂತೆ. ಹೀಗಾಗಿ ಆಕೆ ತನ್ನ ಮನೆಯ ಮೌಲ್ಯವನ್ನ ಹೆಚ್ಚಿಸಲು ನಿರ್ಧರಿಸಿದ್ದಾಳೆ.

https://www.instagram.com/p/CIn6guyMPeS/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...