ಕೇಪ್ ಟೌನ್: ಕರೋನಾ ಸಾಂಕ್ರಾಮಿಕದ ಸಲುವಾಗಿ ಮಾಡಿದ ಲಾಕ್ ಡೌನ್ ಪ್ರಾಣಿಗಳು ನಗರ ಸಂಚಾರ ಮಾಡಲು ಕಾರಣವಾಗಿದೆ.
ಆಫ್ರಿಕಾದ ಕೇಪ್ ಟೌನ್ನ ನಡು ಬೀದಿಯಲ್ಲಿ ಮೂರು ಪೆಂಗ್ವಿನ್ ಪಕ್ಷಿಗಳು ಓಡಾಡಿದ ವಿಡಿಯೋ ವೈರಲ್ ಆಗಿದೆ.
ಬೋಲ್ಡರ್ಸ್ ಬೀಚ್ ಸಮೀಪದ ಪೆಂಗ್ಯುನ್ ಕಾಲೋನಿಯಲ್ಲಿ ವಾಹನ ಓಡಾಟ ಇಲ್ಲದ ಕಾರಣ ಪೆಂಗ್ವಿನ್ ಗಳು ತಮ್ಮ ಪುಟ್ಟ ರೆಕ್ಕೆ ಎತ್ತಿಕೊಂಡು ಕಾಲು ಹೊಸೆಯುತ್ತ ರಸ್ತೆ ದಾಟುವ ದೃಶ್ಯ ಖುಷಿ ನೀಡುತ್ತದೆ.
ಪೆಂಗ್ವಿನ್ ಗಳು ಕಡಲ ತೀರದತ್ತ ಮೊಟ್ಟೆ ಇಡಲು ತೆರಳುತ್ತಿವೆ ಎಂದು ವಿಡಿಯೋ ಅಪ್ ಲೋಡ್ ಮಾಡಿದ ಸಿಲರ್ ಎಂಬುವವರು ತಿಳಿಸಿದ್ದಾರೆ.