alex Certify ಚರ್ಚಿಲ್‌ ರ ಈ ಚಿತ್ರಕ್ಕೆ ಸಿಗಲಿದೆ ಭಾರಿ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಚಿಲ್‌ ರ ಈ ಚಿತ್ರಕ್ಕೆ ಸಿಗಲಿದೆ ಭಾರಿ ಬೆಲೆ…!

Winston Churchill's Painting of Favourite Whisky May Fetch £250,000 at Sotheby's Auction

ಬ್ರಿಟನ್‌ ಮಾಜಿ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್‌ಗೆ ಪ್ರಿಯವಾಗಿದ್ದ ಜಾನಿ ವಾಕರ್‌ ಬ್ಲಾಕ್ ಲೇಬಲ್ ವಿಸ್ಕಿ ಹಾಗೂ ಬ್ರಾಂಡಿ ಬಾಟಲ್‌ಗಳನ್ನು ಜಗ್ ಮತ್ತು ಗ್ಲಾಸ್‌ಗಳೊಂದಿಗೆ ಚಿತ್ರಿಸಿರುವ ತೈಲ ಚಿತ್ರವೊಂದು ಭಾರೀ ಸುದ್ದಿ ಮಾಡಿದೆ.

ಇಂಗ್ಲೆಂಡ್‌ನ ಆಗ್ನೇಯದಲ್ಲಿರುವ ಚಾರ್ಟ್‌ವೆಲ್ ಪ್ರದೇಶದಲ್ಲಿರುವ ಚರ್ಚಿಲ್‌ರ ಹಳ್ಳಿ ಮನೆಯಲ್ಲಿ ಈ ಚಿತ್ರವನ್ನು ಬಿಡಿಸಲಾಗಿದೆ. ’ಜಗ್ ವಿತ್‌ ಬಾಟಲ್ಸ್‌’ ಹೆಸರಿನ ಈ ತೈಲ ಚಿತ್ರ ಹರಾಜಿನಲ್ಲಿ 250,000 ಪೌಂಡ್‌ಗಳಿಗೆ ಬಿಕರಿಯಾಗುವ ಸಾಧ್ಯತೆ ಇದೆ.

ಖುದ್ದು ಪೇಂಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಚರ್ಚಿಲ್‌‌ ಈ ಪೇಂಟಿಂಗ್ ‌ಅನ್ನು 1930ರಲ್ಲಿ ಮಾಡಿದ್ದು, ಅದನ್ನು ಅಮೆರಿಕದ ಉದ್ಯಮಿ ಅವೆರೆಲ್ ಹ್ಯಾರಿಮನ್‌ಗೆ ಕೊಟ್ಟಿದ್ದರು. ಹ್ಯಾರಿಮನ್ 1940ರ ದಶಕದಲ್ಲಿ ಯೂರೋಪ್‌ನ ಅಮೆರಿಕ ವಿಶೇಷ ಪ್ರತಿನಿಧಿಯಾಗಿ ಹೊಣೆಗಾರಿಕೆ ನಿರ್ವಹಿಸಿದ್ದರು.

ಸಮಾನಮನಸ್ಕ ಜನರಿಗೆ ಚರ್ಚಿಲ್‌ ತಮ್ಮ ಮೆಚ್ಚಿನ ಚಿತ್ರಗಳನ್ನು ಕೊಡುತ್ತಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...