alex Certify BIG NEWS: ಕಡ್ಡಾಯವಾಗಲಿದೆಯಾ ವ್ಯಾಕ್ಸಿನೇಷನ್ ಕಾರ್ಡ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಡ್ಡಾಯವಾಗಲಿದೆಯಾ ವ್ಯಾಕ್ಸಿನೇಷನ್ ಕಾರ್ಡ್…?

ಮನೆಗೊಂದು ಹೊಸ ಮಗುವಿನ ಆಗಮನವಾಗುತ್ತೆ ಅಂದರೆ ಯಾರಿಗ್​ ತಾನೇ ಖುಷಿ ಇರಲ್ಲ ಹೇಳಿ..? ಪೋಷಕರಾಗಿ ಬಡ್ತಿ ಪಡೆಯುವ ಸಂತಸಕ್ಕಿಂತ ಮಿಗಿಲಾದ್ದದ್ದು ಇನ್ನೊಂದಿಲ್ಲ. ಈ ಖುಷಿಯ ಜೊತೆಗೆ ಹಸುಗೂಸುಗಳ ಆರೋಗ್ಯವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡೋದು ಪೋಷಕರ ಆದ್ಯ ಕರ್ತವ್ಯವಾಗಿರಬೇಕು.

ಮಗುವಿನ ಪೋಷಕರಾದ ಬಳಿಕ ಅವರ ಸರ್ವಾಂಗೀಣ ಆರೋಗ್ಯವನ್ನ ಕಾಪಾಡೋದು ಪೋಷಕರ ಜವಾಬ್ದಾರಿಯಾಗಿರುತ್ತೆ. ಕಂದಮ್ಮಗಳ ರೋಗ ನಿರೋಧಕ ಶಕ್ತಿ ಹಾಗೂ ಉತ್ತಮ ಬೆಳವಣಿಗೆಗಾಗಿ ಕಾಲ ಕಾಲಕ್ಕೆ ವೈದ್ಯರು ಸೂಚಿಸಿದ ಲಸಿಕೆಗಳನ್ನ ನೀಡೋದು ಅನಿವಾರ್ಯವಾಗಿದೆ. ಸರಿಯಾದ ಸಮಯಕ್ಕೆ ವೈದ್ಯರು ಸೂಚಿಸಿದ ಲಸಿಕೆಗಳನ್ನ ತಪ್ಪದೇ ನೀಡೋದ್ರಿಂದ ಡಜನ್​ಗೂ ಹೆಚ್ಚು ಕಾಯಿಲೆಗಳು ಮಕ್ಕಳಿಗೆ ಬಾಧಿಸದಂತೆ ತಡೆಯಬಹುದಂತೆ.

ಯಾವ ವಯಸ್ಸಿಗೆ ಮಕ್ಕಳಿಗೆ ಯಾವ ಲಸಿಕೆ ನೀಡಿದ್ದೇವೆ ಎಂಬ ದಾಖಲೆಯನ್ನ ನೀವು ಖಚಿತ ಮಾಡಿಕೊಳ್ಳಬೇಕು. ಹೀಗಾಗಿ ನೀವು ಮಕ್ಕಳ ಆರೋಗ್ಯ ಕಾರ್ಡ್​ನ್ನ ಸರಿಯಾಗಿ ಇಟ್ಟುಕ್ಕೊಳ್ಳಬೇಕು. ಅನಿವಾರ್ಯ ಕಾರಣದಲ್ಲಿ ವೈದ್ಯರನ್ನ ಬದಲಿಸಬೇಕಾದ ಸಂದರ್ಭ ಬಂದಾಗ ಮಕ್ಕಳ ಆರೋಗ್ಯ ದೃಷ್ಟಿಯಿಂದ ಈ ಕಾರ್ಡ್​ಗಳು ತುಂಬಾನೇ ಮುಖ್ಯ ಎನಿಸಿಕೊಳ್ಳಲಿದೆ.

ಹೀಗಾಗಿ ವಿಶ್ವಾದ್ಯಂತ ವೈದ್ಯರು ಶಿಫಾರಸು ಮಾಡಿರುವ ವ್ಯಾಕ್ಸಿನೇಷನ್​ ಕಾರ್ಡ್ಗಗಳನ್ನ ಪೋಷಕರು ಹೊಂದುವುದು ಅನಿವಾರ್ಯ. ಈ ಕಾರ್ಡ್​ನ್ನು ಹೊಂದುವುದರಿಂದ ಮಗುವಿನ ದಾಖಲೆ, ಲಸಿಕೆ ದಿನಾಂಕ ಹೀಗೆ ಎಲ್ಲಾ ಮಾಹಿತಿ ಒಂದೆಡೆಯೇ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...