alex Certify BIG NEWS: ಕೊರೊನಾ ವೈರಸ್‌ ಮೂಲ ಕೊನೆಗೂ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ವೈರಸ್‌ ಮೂಲ ಕೊನೆಗೂ ಪತ್ತೆ….!

ಕೋವಿಡ್ ಸಾಂಕ್ರಮಿಕದ ಗದ್ದಲ ಆರಂಭಗೊಂಡು ವರ್ಷ ಕಳೆದಿದ್ದು, ಈ ಸೋಂಕು ಮೊದಲ ಬಾರಿಗೆ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವರದಿಯಾಗಿತ್ತು.

23.4 ಲಕ್ಷ ಮಂದಿಯ ಜೀವ ತೆಗೆದುಕೊಂಡಿರುವ ಈ ವೈರಸ್‌ನ ಮೂಲದ ಬಗ್ಗೆ ಚೀನಾ ಪಾರದರ್ಶಕವಾದ ವಿವರಗಳನ್ನು ಕೊಡುತ್ತಿಲ್ಲ ಎಂದು ಅಮೆರಿಕ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಆಪಾದನೆ ಮಾಡುತ್ತಲೇ ಬಂದಿವೆ.

ವುಹಾನ್‌ನ ಪ್ರಯೋಗಾಲಯವೊಂದರಿಂದ ಈ ವೈರಸ್ ಸೋರಿರಬಹುದು ಎಂಬ ಆಪಾದನೆ ಸೇರಿದಂತೆ ಹಲವು ಆಯಾಮಗಳ ಮೇಲೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ 14 ವಿಜ್ಞಾನಿಗಳ ತಂಡವೊಂದು ತನ್ನ ತನಿಖೆಯ ಅಂತಿಮ ವರದಿ ಕೊಟ್ಟಿದೆ.

50 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಸಿಗುತ್ತಾ ಕೊರೊನಾ ಲಸಿಕೆ…? ಕುತೂಹಲ ಕೆರಳಿಸಿದೆ ಕೇಂದ್ರದ ತೀರ್ಮಾನ

ಇದೀಗ ಕೋವಿಡ್-19 ಸೋಂಕು, ಆಸ್ಟ್ರೇಲಿಯನ್ ಬೀಫ್‌ನಂಥ ಶೀತಲ ಸಂಸ್ಕರಣೆಯಲ್ಲಿದ್ದ ಉತ್ಪನ್ನಗಳಿಂದ ಉಗಮವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ ತನಿಖಾಧಿಕಾರಿಗಳು, ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್‌ ಪಕ್ಷದ ವಾದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದ್ದಾರೆ.

ಈ ವೈರಸ್‌ ಚೀನಾದೊಳಗೆ ಆಮದಾಗಿದೆಯೇ ಎಂದು ಪತ್ತೆ ಮಾಡಬೇಕಿದೆ ಎಂದು ತನಿಖಾ ತಂಡದ ನಾಯಕ ಪೇಟರ್‌ ಎಂಬರೆಕ್‌ ತಿಳಿಸಿದ್ದು, ವೈರಸ್‌ ಲ್ಯಾಬ್‌ನಿಂದ ಲೀಕ್ ಆಗಿರುವ ಸಾಧ್ಯತೆ ಇಲ್ಲವೇ ಇಲ್ಲವೆಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...