alex Certify ಮಹಿಳಾ ದೌರ್ಜನ್ಯದ ಕುರಿತು ಸಮೀಕ್ಷೆಯಲ್ಲಿ ‘ಶಾಕಿಂಗ್’ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ದೌರ್ಜನ್ಯದ ಕುರಿತು ಸಮೀಕ್ಷೆಯಲ್ಲಿ ‘ಶಾಕಿಂಗ್’ ಸಂಗತಿ ಬಹಿರಂಗ

ಮೊದಲೇ ಮಹಿಳೆಯರ ರಕ್ಷಣೆಗೆಂದು ತರಲಾದ ಕಾನೂನು ದುರ್ಬಳಕೆಯ ಅನೇಕ ನಿದರ್ಶನಗಳು ಹೊರಗೆ ಬಂದು ಎಲ್ಲೆಡೆ ಅಪನಂಬಿಕೆಯ ವಾತಾವರಣ ಹೆಚ್ಚುತ್ತಿದೆ. ಇದೇ ವೇಳೆ ವಿಶ್ವ ಸಂಸ್ಥೆಯ ಆರೋಗ್ಯ ಏಜೆನ್ಸಿ ಬಿಡುಗಡೆ ಮಾಡಿರುವ ವರದಿಯೊಂದು ಈ ಅಪನಂಬಿಕೆಯನ್ನು ಇನ್ನಷ್ಟು ಹೆಚ್ಚಿಸುವಂತಿದೆ.

ಜಗತ್ತಿನಾದ್ಯಂತ ಪ್ರತಿ ಮೂವರಲ್ಲಿ ಒಬ್ಬರು ಮಹಿಳೆಗೆ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಲೈಂಗಿಕ ಕಿರುಕುಳದ ಅನುಭವವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದು ತಿಳಿಸುತ್ತಿದೆ.

ಮಹಿಳೆಯರ ವಿರುದ್ಧ ಹಿಂಸಾಚಾರ ಸಂಬಂಧ ಸಮೀಕ್ಷೆ ನಡೆಸಿ ಸಿದ್ಧಪಡಿಸಲಾದ ಈ ವರದಿಯಲ್ಲಿ, ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯರ ಪೈಕಿ ಕಾಲು ಭಾಗದಷ್ಟು ಮಂದಿಗೆ ತಮ್ಮ 20ನೇ ವಯಸ್ಸಿಗೂ ಮುನ್ನವೇ ತಂತಮ್ಮ ಸಂಗಾತಿಗಳಿಂದ ಲೈಂಗಿಕ ಒತ್ತಡಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ ಎಂದು ತಿಳಿದು ಬಂದಿದೆ.

2010-2018ರ ನಡುವಿನ ಅವಧಿಯ ಕಾಲಘಟ್ಟವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದ್ದು, ಕೋವಿಡ್-19 ಸಾಂಕ್ರಮಿಕ ಅವಧಿಯನ್ನು ಗಣನೆಗೆ ತೆಗೆದುಕೊಂಡಿಲ್ಲ.

ಊಹಿಸಲಾರದ ಘಟನೆ ನಡೆದಿದ್ದರಿಂದ ಮುಜುಗರಕ್ಕೊಳಗಾದ ಮಹಿಳೆ

ಲಾಕ್‌ಡೌನ್ ಕಾರಣದಿಂದ ಜನರು ಮನೆಗಳಲ್ಲೇ ಬಂಧಿಯಾಗಿರುವ ಕಾರಣದಿಂದ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯಗಳು ಇನ್ನಷ್ಟು ಹೆಚ್ಚುತ್ತಲೇ ಇವೆ ಎಂದು ಹೇಳಲಾಗಿದೆ.

ಎಂಟು ವರ್ಷಗಳ ಅವಧಿಯಲ್ಲಿ 158 ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, 15 ವರ್ಷ ಮೇಲ್ಪಟ್ಟ ಮಹಿಳೆಯರ ಮೇಲೆ ನಡೆಯಲಾದ ಲೈಂಗಿಕ ಕಿರುಕುಳಗಳು/ಒತ್ತಡಗಳ ಕುರಿತು ಅಧ್ಯಯನ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...