alex Certify ಮನೆಗೆಲಸಕ್ಕೆ ವೇಳಾಪಟ್ಟಿಯನ್ನು ರೂಪಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆಲಸಕ್ಕೆ ವೇಳಾಪಟ್ಟಿಯನ್ನು ರೂಪಿಸಿದ ಮಹಿಳೆ

ಕೊರೋನಾ ಲಾಕ್‌ಡೌನ್ ಅವಧಿಯಲ್ಲೂ ಸಹ ಮನೆಯನ್ನು ಹೇಗೆ ಚೊಕ್ಕವಾಗಿ ಇಟ್ಟುಕೊಳ್ಳಬೇಕು ಎಂಬುದಕ್ಕೆ ಉದಾಹರಣೆಯಾಗಿರುವ ಇಂಗ್ಲೆಂಡ್‌ನ ನಿಕೋಲ್ ಥಾಂಪ್ಸನ್ ಎಂಬುವವರು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

ಪ್ರತಿನಿತ್ಯ, ವಾರ, ತಿಂಗಳು ಹಾಗೂ ವರ್ಷದ ಮಟ್ಟದಲ್ಲಿ ಮನೆಯ ಕ್ಲೀನಿಂಗ್‌ನ ವಿವಿಧ ಕ್ರಿಯೆಗಳನ್ನು ಹೇಗೆ ಹಾಗೂ ಯಾವಾಗೆಲ್ಲಾ ಮಾಡಬೇಕೆಂಬ ವೇಳಾಪಟ್ಟಿಯನ್ನು ಬರೆದಿಟ್ಟುಕೊಂಡಿರುವ ನಿಕೋಲ್, ಪ್ರತಿ ವಾರ ತಮ್ಮ ಮನೆಯನ್ನು ಕ್ಲೀನ್ ಮಾಡಲೆಂದೇ 40 ಗಂಟೆಗಳನ್ನು ಮೀಸಲಿಡುತ್ತಾರೆ. ಆಫೀಸ್ ಕೆಲಸಕ್ಕೂ ಮುನ್ನ ಹಾಗೂ ಆಫೀಸ್‌ ಕೆಲಸವಾದ ಬಳಿಕ ಏನೆಲ್ಲಾ ಮಾಡಬೇಕೆಂದು ಪಕ್ಕಾ ಪ್ಲಾನಿಂಗ್ ಮಾಡಿಕೊಂಡಿದ್ದಾರೆ ನಿಕೋಲ್.

ಈ ‘before/after work’ ವೇಳಾಪಟ್ಟಿ ಕೇವಲ ವಾರದ ದಿನಗಳಿಗೆ ಮಾತ್ರವೇ ಸೀಮಿತವಾಗಿದ್ದು, ವಾರಾಂತ್ಯದಲ್ಲಿ ಬೇರೆಯದ್ದೇ ದಿನಚರಿ ಇರಲಿದೆ. ಇವರ ಈ ಕಾರ್ಯವೈಖರಿಯನ್ನು ಸಾರುವ ವೇಳಾಪಟ್ಟಿಯನ್ನು ಒಮ್ಮೆ ನೀವೇ ನೋಡಿ ಕಣ್ಣು ತುಂಬಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...