alex Certify ಮಗುವಿಗೆ ಐಬ್ರೊ ಮಾಡಿ ಖುಷಿ ಪಡುತ್ತಿದ್ದಾಳೆ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಐಬ್ರೊ ಮಾಡಿ ಖುಷಿ ಪಡುತ್ತಿದ್ದಾಳೆ ತಾಯಿ

ನ್ಯೂಯಾರ್ಕ್: ಕರೊನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮನ್ನು ಜನ ಕ್ರಿಯಾಶೀಲರಾಗಿರಲು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಕೆಲವರು ಡಾನ್ಸ್, ಇನ್ನು ಕೆಲವರು ಹೊಸ ಹೇರ್ ಕಟ್‌, ಮತ್ತೆ ಕೆಲವರು ಹೊಸ ರುಚಿ ಪ್ರಯೋಗ ಮಾಡುತ್ತಿದ್ದಾರೆ.‌ ಕೆಲ ಮಹಿಳೆಯರು ಮನೆಯಲ್ಲೇ ಹೊಸ ಹೊಸ‌ ಮೇಕಪ್‌ ಪ್ರಯೋಗ ಮಾಡುತ್ತಿದ್ದಾರೆ.

ಆದರೆ, ಇಲ್ಲೊಬ್ಬಳು ತನ್ನ ಮೇಲಲ್ಲ‌ ತನ್ನ ಮಗುವಿನ ಮೇಲೆ ಮೇಕಪ್‌ ಪ್ರಯೋಗ ಮಾಡುತ್ತಿದ್ದಾಳೆ. ಅಮೆರಿಕಾದ ಪಶ್ಚಿಮ‌ ಕರಾವಳಿಯ ಒರೆಗಾನ್ ರಾಜ್ಯದ 28 ವರ್ಷದ ಮಹಿಳೆ ಮೊರ್ಗನ್ ತನ್ನ ಪುಟ್ಟ ಮಗಳು ಲೈಘ್ಟೊನ್ ಮೆಯಿ ರೋಸ್ ಗೆ ಹೊಸ ಐಬ್ರೊ ಮಾಡಿ ಅದರ ವಿಡಿಯೋ ಮಾಡಿ ಟಿಕ್ ಟಾಕ್ ಗೆ ಅಪ್ ಲೋಡ್ ಮಾಡುತ್ತಿದ್ದಾರೆ. ಜನ ಇದನ್ನು ನೋಡಿ ನಗು ತುಂಬಿಕೊಳ್ಳುತ್ತಿದ್ದಾರೆ.

“ನಾನು ವರ್ಷದ ಹಿಂದೆ ಇದೇ ರೀತಿಯ ಐಬ್ರೊ ನೋಡಿದ್ದೆ. ನನ್ನ ಕುಟುಂಬದೊಟ್ಟಿಗೆ ಖುಷಿಪಟ್ಟಿದ್ದೆ. ಇದು ಹೆಚ್ಚು ಮಜವಾಗಿರುತ್ತದೆ ಎಂದು ನಾವು ಯೋಚಿಸಿದ್ದೆವು. ಆಕೆ ಐಬ್ರೊದೊಂದಿಗೆ ಚೆನ್ನಾಗಿ ಕಾಣುತ್ತಾಳೆ” ಎಂದು ಮೊರ್ಗನ್ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...