alex Certify ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಪಾರ್ಕಿಂಗ್​ ಸರ್ಕಸ್​ನ ಈ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಪಾರ್ಕಿಂಗ್​ ಸರ್ಕಸ್​ನ ಈ ವಿಡಿಯೋ..!

ರಸ್ತೆಗಳಲ್ಲಿ ಕಾರನ್ನ ಪಾರ್ಕ್​ ಮಾಡೋದು ಕೊಂಚ ಕಷ್ಟದ ಕೆಲಸವೇ. ಟಿಕ್​ಟಾಕ್​​ನಲ್ಲಿ ಶೇರ್​ ಮಾಡಲಾದ ವಿಡಿಯೋವೊಂದರಲ್ಲಿ ಮಹಿಳೆ ತನ್ನ ಕಾರನ್ನ ಪಾರ್ಕ್​ ಮಾಡೋಕೆ ಪಟ್ಟ ಪಾಡನ್ನ ಕಂಡು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಈ ಒಂದು ನಿಮಿಷದ ವಿಡಿಯೋವನ್ನ ಟ್ವಿಟರ್​ನಲ್ಲೂ ಶೇರ್​ ಮಾಡಲಾಗಿದೆ. ಮುಂದೆ ಹಾಗೂ ಹಿಂದೆ ಕಾರುಗಳು ನಿಂತಿದ್ದರಿಂದ ಮಧ್ಯದಲ್ಲಿ ಬಾಕಿ ಉಳಿದ ಜಾಗದಲ್ಲಿ ತನ್ನ ಕಾರನ್ನ ನಿಲ್ಲಿಸೋಕೆ ಮಹಿಳೆ ಪಡುವ ಪಾಡು ಹೇಳತೀರದು. ಒಂದು ಸಂದರ್ಭದಲ್ಲಂತೂ ಮಹಿಳೆ ಕಾರಿನಿಂದ ಕೆಳಗಿಳಿದು ತನ್ನ ಹೆಜ್ಜೆ ಮೂಲಕವೇ ಅಲ್ಲಿರುವ ಜಾಗವನ್ನ ಹಾಗೂ ತನ್ನ ಕಾರಿನ ಉದ್ದವನ್ನ ತಾಳೆ ಹಾಕುತ್ತಾಳೆ.

ಮಹಿಳೆಯ ಸಾಕಷ್ಟು ಪ್ರಯತ್ನದ ಬಳಿಕವೂ ಕಾರನ್ನ ಪಾರ್ಕ್​ ಮಾಡೋಕೆ ಆಕೆಯಿಂದ ಸಾಧ್ಯವಾಗೋದಿಲ್ಲ. ಕೊನೆಗೆ ಇನ್ನೊಬ್ಬ ಮಹಿಳೆ ಈಕೆಯ ಸಹಾಯಕ್ಕೆ ನಿಲ್ಲುತ್ತಾಳೆ. ಕಾರನ್ನ ಪಾರ್ಕ್ ಮಾಡೋಕೆ ಸೂಚನೆಯನ್ನ ಕೊಡುತ್ತಾಳೆ. ಈ ಅಪರಿಚಿತ ಮಹಿಳೆಯ ಸಹಾಯದಿಂದ ಆಕೆ ತನ್ನ ಕಾರನ್ನ ಸರಿಯಾಗಿ ಪಾರ್ಕ್ ಮಾಡುತ್ತಾಳೆ.

ಆದರೆ ಕತೆ ಇಲ್ಲಿಗೇ ಮುಗಿಯೋದಿಲ್ಲ. ಸಹಾಯ ಮಾಡಿದ್ದ ಮಹಿಳೆ ಅಸಲಿಗೆ ಹಿಂಬದಿ ನಿಂತಿದ್ದ ಕಾರಿನ ಮಾಲೀಕೆ ಆಗಿದ್ದಳು. ಈಕೆ ಕಾರು ಪಾರ್ಕ್ ಮಾಡ್ತಿದ್ದಂತೆಯೇ ತನ್ನ ಕಾರನ್ನ ಹತ್ತಿ ಆಕೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಆದರೆ ಇಷ್ಟೊತ್ತು ಇನ್ನಿಲ್ಲದ ಹರಸಾಹಸ ಪಟ್ಟಿದ್ದ ಮಹಿಳೆ ಆಕೆ ಕಾರು ಹತ್ತಿ ಹೋಗಿದ್ದನ್ನ ಕಂಡು ಶಾಕ್​ ಆಗಿದ್ದಾಳೆ.

ಈ ವಿಡಿಯೋ ಟ್ವಿಟರ್​ನಲ್ಲಿ ಬರೋಬ್ಬರಿ 9.7 ಮಿಲಿಯನ್​ ವೀವ್ಸ್ ಸಂಪಾದಿಸಿದೆ. ಅನೇಕರು ಮಹಿಳೆಯ ಮೂರ್ಖತನವನ್ನ ಕಂಡು ನಕ್ಕಿದ್ರೆ ಇನ್ನೂ ಕೆಲವರು ಆಕೆ ಇನ್ನೊಬ್ಬಳಿಗೆ ಕಾರ್​ ಪಾರ್ಕ್​ ಮಾಡೋದನ್ನ ಕಲಿಸಿದ್ದಾಳೆ. ನಾವಿದನ್ನ ಮೆಚ್ಚಲೇಬೇಕು ಎಂದು ಹೇಳ್ತಿದ್ದಾರೆ. ಅಂದಹಾಗೆ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು..?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...