alex Certify ಚಿರತೆ ಕಾಳಗದ ಫೋಟೋ ವೈರಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆ ಕಾಳಗದ ಫೋಟೋ ವೈರಲ್….!

ಕಾಡಿನಲ್ಲಿದ್ದ ಎರಡು ಚಿರತೆಗಳು ಪರಸ್ಪರ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಂದಹಾಗೆ ಈ ದೃಶ್ಯ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾನವನದಲ್ಲಿ ಫೋಟೋಗ್ರಾಫರ್​ ಲಿಸ್ಲ್​​ ಮೂಲ್ಮನ್​ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋದಲ್ಲಿ ತಾಯಿ ಚಿರತೆ ಮೋಯಾ ಮರದ ಬುಡದಲ್ಲಿ ಹಾಗೂ ಅದರ ಮರಿ ಅಮೀರಾ ಮರದ ಕೊಂಬೆಯ ಮೇಲೆ ಕುಳಿತಿದೆ. ಮೋಯಾ ಹಾಗೂ ಅಮೀರಾ ಮೊದಲು ಕೂಗುತ್ತಾರೆ. ಬಳಿಕ ಮೋಯಾ ತನ್ನ ಮಗಳು ಅಮೀರಾ ಮೇಲೆ ದಾಳಿ ಮಾಡಲು ಕೊಂಬೆಯ ಮೇಲೆ ಜಿಗಿಯುತ್ತಾಳೆ.

ಜಗಳವಾಡುತ್ತಾ ಈ ಎರಡು ಚಿರತೆಗಳು ನೆಲಕ್ಕೆ ಬೀಳುತ್ತವೆ. ನೆಲದ ಮೇಲೆ ಉರುಳಾಡುತ್ತಿದ್ದರೂ ತಾಯಿ – ಮಗಳು ತಮ್ಮ ಹೋರಾಟವನ್ನ ನಿಲ್ಲಿಸೋದಿಲ್ಲ. ಹೋರಾಟದ ಕೊನೆಯಲ್ಲಿ ಎರಡೂ ಚಿರತೆ ನೆಲದ ಮೇಲೆ ಸುಸ್ತಾಗಿ ಮಲಗುತ್ತವೆ. ಆದರೆ ಮಗಳು ಚಿರತೆ ಅಮೀರಾ ಮೊದಲು ನಿಲ್ಲುವ ಮೂಲಕ ತಾಯಿಯ ವಿರುದ್ಧ ಜಯಶಾಲಿಯಾಗುತ್ತಾಳೆ. ಹಾಗೂ ಮತ್ತೆ ಮರವನ್ನೇರಿ ಕೊಂಬೆಯ ಮೇಲೆ ಹತ್ತಿ ಕೂರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...