alex Certify ಸೀಬೆ ಹಣ್ಣನ್ನ ತಿಂದು ನಿಯಂತ್ರಣ ಕಳೆದುಕೊಂಡ ಅಳಿಲು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀಬೆ ಹಣ್ಣನ್ನ ತಿಂದು ನಿಯಂತ್ರಣ ಕಳೆದುಕೊಂಡ ಅಳಿಲು..!

ಹಾಳಾಗಿದ್ದ ಸೀಬೆ ಹಣ್ಣನ್ನ ತಿಂದ ಅಳಿಲೊಂದು ಮದ್ಯವಸನಿಯಂತೆ ನಿಲ್ಲಲು ಆಗದೇ ತೂರಾಡಿದ ವಿಚಿತ್ರ ಘಟನೆ ಅಮೆರಿಕದ ಮಿನ್ನಿಸೋಟಾದಲ್ಲಿ ನಡೆದಿದೆ.

ಯು ಟ್ಯೂಬ್​ನಲ್ಲಿ ವೈರಲ್​ ಆದ ವಿಡಿಯೋದಲ್ಲಿ ಹಣ್ಣನ್ನ ತಿಂದ ಅಳಿಲು ನಿಲ್ಲೋಕೂ ಆಗದೇ ತೂರಾಡಿದ್ದನ್ನ ನೋಡಬಹುದಾಗಿದೆ.

ಸೀಬೆ ಹಣ್ಣನ್ನ ತಿಂದ ಅಳಿಲು ಬಳಿಕ ತನ್ನ ನಿಯಂತ್ರಣ ಕಳೆದುಕೊಳ್ಳುತ್ತೆ. ತನ್ನ ಸಮತೋಲನ ಕಾಪಾಡಿಕೊಳ್ಳಲು ಅಳಿಲು ಸಿಕ್ಕಾಪಟ್ಟೆ ಪ್ರಯತ್ನ ಪಡುತ್ತೆ. ಕೊನೆಗೆ ತನ್ನನ್ನ ತಾನು ಸಮತೋಲನ ಮಾಡಿಕೊಂಡ ಅಳಿಲು ಮತ್ತೆ ತಿನ್ನಲು ಆರಂಭಿಸುತ್ತೆ.

ಕ್ಯಾಥ್ಲೀನ್​ ಮೊರ್ಲೋಕ್​ ಎಂಬವರು ತಮ್ಮ ಮನೆಯ ಫ್ರಿಡ್ಜ್​ ಸ್ವಚ್ಛ ಮಾಡುತ್ತಿದ್ದ ವೇಳೆ ಹಾಳಾದ ಸೀಬೆ ಹಣ್ಣನ್ನ ನೋಡಿದ್ದಾರೆ.

ಅದನ್ನ ವಿಲೇವಾರಿ ಮಾಡುವ ಬದಲು ಅದನ್ನ ಸಾಕು ಹಂದಿಗೆ ನೀಡಿದರು. ಆದರೆ ಹಂದಿ ಕೇವಲ ಒಂದು ಹಣ್ಣನ್ನ ಮಾತ್ರ ಸೇವಿಸಿತ್ತು.

ಇದಾದ ಬಳಿಕ ಈ ಹಣ್ಣನ್ನ ಅಳಿಲು ತಿಂದಿದೆ. ಆದರೆ ಹಣ್ಣು ಹಾಳಾಗಿದ್ದರಿಂದ ಗ್ಲುಕೋಸ್​, ಫ್ರುಕ್ಟೋಸ್​ ಹಾಗೂ ಸುಕ್ರೋಸ್​ ಮಿಶ್ರಣವಾಗಿ ಅದು ಆಲ್ಕೋಹಾಲ್​ ಆಗಿ ಪರಿವರ್ತನೆಯಾಗಿದೆ. ಈ ಕಾರಣಕ್ಕೆ ಇದನ್ನ ಸೇವಿಸಿದ ಅಳಿಲು ನಿಯಂತ್ರಣ ಕಳೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...