alex Certify ಮೊಸಳೆಯನ್ನು ದರದರನೆ ಎಳೆದೊಯ್ದವನ ವಿಡಿಯೋ ನೋಡಿ ದಂಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆಯನ್ನು ದರದರನೆ ಎಳೆದೊಯ್ದವನ ವಿಡಿಯೋ ನೋಡಿ ದಂಗಾದ ನೆಟ್ಟಿಗರು

ಫ್ಲೋರಿಡಾ: ವ್ಯಕ್ತಿಯೊಬ್ಬ ಮೊಸಳೆ ಮರಿಯನ್ನು ಮಗುವಿನಂತೆ ಎತ್ತಿಕೊಂಡು ಬಂದ ವಿಡಿಯೋ ಇತ್ತೀಚೆಗಷ್ಟೇ ಫ್ಲೋರಿಡಾದಲ್ಲಿ ಫೇಮಸ್ ಆಗಿತ್ತು.

ಈ ಬಾರಿ ಮೊಸಳೆಯೊಂದನ್ನು ವ್ಯಕ್ತಿಯೊಬ್ಬ ದರದರನೆ ಎಳೆದೊಯ್ಯುವ ವಿಡಿಯೋ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.
ಟೋರಿ ಎಂಬುವವರು ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

“ಫ್ಲೋರಿಡಾದಲ್ಲಿ ಏನು ಬೆಳೆಯುತ್ತದೆ ಎಂದು ಯಾವಾಗಲಾದರೂ ಯಾರಾದರೂ ಕೇಳಿದರೆ, ನಾನು ಈ ವಿಡಿಯೋ ತೋರಿಸುತ್ತೇನೆ. ಯಾವುದೇ ಅಪಾಯ ಮಾಡದ ಮೊಸಳೆಗಳು ಇವಾಗಿವೆ” ಎಂದು ಕ್ಯಾಪ್ಶನ್ ನೀಡಿದ್ದಾರೆ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೊಸಳೆಯ ಕಣ್ಣು ಹಾಗೂ ಬಾಯಿಯನ್ನು ಟೇಪ್ ನಿಂದ ಮುಚ್ಚಿರುವುದು ಕಾಣುತ್ತದೆ‌.

ಮತ್ತೊಂದು ಸಂಸ್ಥೆ ವಿಡಿಯೋವನ್ನು ರೀ ಟ್ವೀಟ್ ಮಾಡಿದ್ದು, ” ಅವರು ಅದನ್ನು ಶಿಕ್ಷಣಕ್ಕಾಗಿ ಎಳೆದೊಯ್ಯುತ್ತಿದ್ದಾರೆ” ಎಂದು ಕ್ಯಾಪ್ಶನ್ ಬರೆದುಕೊಂಡಿದೆ. ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, 64 ಸಾವಿರ ಜನ ಇಷ್ಟಪಟ್ಟಿದ್ದಾರೆ.‌ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...