alex Certify ನೀರಿನೊಳಗೆ ಜಾದೂ ಮಾಡಿ ವಿಶ್ವ ದಾಖಲೆ ಬರೆದ ಜಾದೂಗಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನೊಳಗೆ ಜಾದೂ ಮಾಡಿ ವಿಶ್ವ ದಾಖಲೆ ಬರೆದ ಜಾದೂಗಾರ..!

ಮೂರು ನಿಮಿಷಗಳ ಕಾಲ ನೀರಿನೊಳಗೆ ಇದ್ದು 20 ಬಗೆಯ ಜಾದೂ ಪ್ರದರ್ಶಿಸುವ ಮೂಲಕ ಬ್ರಿಟಿಷ್​ ಜಾದೂಗಾರ ಗಿನ್ನೆಸ್​ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್​ನ ಮಾರ್ಟಿನ್​ ರೀಸ್​ ಎಂಬವರು ಪೈನ್​ವುಡ್​​ ಸ್ಟುಡಿಯೋದಲ್ಲಿ ಈ  ದಾಖಲೆ ಮಾಡುವ ಮೂಲಕ ಬಹಳ ಹಿಂದೆ ನಿರ್ಮಿಸಲಾಗಿದ್ದ ದಾಖಲೆಯನ್ನ ಮುರಿದಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ರೀಸ್​, ನಾನು ಸ್ಕೈಡೈವ್​ ಮಾಡುತ್ತಾ ಮ್ಯಾಜಿಕ್​ ಪ್ರದರ್ಶಿಸಿ 2016ರಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದೆ. ಅಂದಿನಿಂದ ನನ್ನ ಜಾದೂ ಜೊತೆಗಿನ ಜೀವನ ಅಮೋಘವಾಗಿಯೇ ಸಾಗಿದೆ ಅಂತಾ ಸಂತಸ ವ್ಯಕ್ತಪಡಿಸಿದ್ರು.

ಅಂದಹಾಗೆ ರೀಸ್​ದು ಇದು ಐದನೇ ವಿಶ್ವ ದಾಖಲೆ. ಕೆಲ ಸಮಯದ ಹಿಂದಷ್ಟೇ ರೀಸ್​ ಒಂದು ನಿಮಿಷದಲ್ಲಿ ಅತಿ ಹೆಚ್ಚು ಕಾರ್ಡ್ಸ್​ಗಳನ್ನ ಗುರುತಿಸುವ ಮೂಲಕ ಸಾಧನೆ ಮಾಡಿದ್ದರು.

ಸ್ಕೈ ಡೈವ್​ ಮಾಡುತ್ತಾ ಅತಿ ಹೆಚ್ಚು ಜಾದೂ ಪ್ರದರ್ಶಿಸಿದ್ದಾರೆ. ಒಂದು ನಿಮಿಷ ಕಣ್ಣು ಮುಚ್ಚಿಕೊಂಡು ಅತಿ ಹೆಚ್ಚು ಜಾದೂ ಪ್ರದರ್ಶನ ಹಾಗೂ ಮೂರು ನಿಮಿಷಗಳ ಕಾಲ ಗಾಳಿ ಸುರಂಗದಲ್ಲಿದ್ದು ವಿಶ್ವದಲ್ಲೇ ಅತಿ ಹೆಚ್ಚು ಬಗೆಯ ಮ್ಯಾಜಿಕ್​ ಪ್ರದರ್ಶಿಸಿದ ಸಾಧನೆಗಳನ್ನ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...