alex Certify ಕ್ಯಾಮರಾದಲ್ಲಿ ಸೆರೆಯಾಗಿದೆ ಅಪರೂಪದ ವಿದ್ಯಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಅಪರೂಪದ ವಿದ್ಯಮಾನ

ಇದೊಂದು ವಿಚಿತ್ರ ಪ್ರಕೃತಿ ವಿಸ್ಮಯ. ಕೀನ್ಯಾದಲ್ಲಿ ನಡೆದ ಘಟನೆ. ಸಿಂಕ್ ಹೋಲ್ ಒಂದು ತನ್ನತ್ತ ಬರುವ ಕಸಕಡ್ಡಿ, ಹುಲ್ಲು ಎಲ್ಲವನ್ನು ಬಾಚಿ ಸೆಳೆದುಕೊಳ್ಳುವ ಅಪರೂಪದ ಸಂದರ್ಭವದು.
ಆ ಪ್ರದೇಶದಲ್ಲಿ ಭಾರಿ ಮಳೆಯ ನಂತರ ನಡೆದ ಕೌತುಕ ವಿಡಿಯೋ ಮಾಡಿಕೊಳ್ಳಲಾಗಿದೆ.

ಸಾಮಾನ್ಯವಾಗಿ ನದಿ ಹಳ್ಳಕೊಳ್ಳಗಳು ಮಳೆಯ ರಭಸದ ವೇಳೆ ಅಕ್ಕಪಕ್ಕದ ವಸ್ತುಗಳನ್ನು ಸೆಳೆದುಕೊಂಡು ಹೋಗುವ ಸಂದರ್ಭಗಳನ್ನು ಕಾಣಬಹುದು. ಆದರೆ ಈ ಸಿಂಕ್ ಹೋಲ್ ಗಳು ವಿಚಿತ್ರ ಬೆಳವಣಿಗೆ.

ಈ ಅಪರೂಪದ ನೈಸರ್ಗಿಕ ವಿದ್ಯಮಾನ ಸಂಭವಿಸಿರುವುದು ಗ್ರೇಟ್ ರಿಸ್ಟ್ ಕಣಿವೆಯಲ್ಲಿ. ಸಾಮಾನ್ಯವಾಗಿ ಇಂಥ ಭೂ ರಂಧ್ರ, ಬಿರುಕುಗಳು ಜ್ವಾಲಾಮುಖಿ ಉಂಟಾಗುವ ಪ್ರದೇಶದಲ್ಲಿ ಕಂಡುಬರುತ್ತವೆ. ಅಪರೂಪದ ಈ ಬೆಳವಣಿಗೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...