alex Certify ತಲೆ ನೇವರಿಸುವ ನಿರೀಕ್ಷೆಯಲ್ಲಿದ್ದ ಪಕ್ಷಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ನೇವರಿಸುವ ನಿರೀಕ್ಷೆಯಲ್ಲಿದ್ದ ಪಕ್ಷಿ ಮಾಡಿದ್ದೇನು ಗೊತ್ತಾ…?

Watch: Bird Reacts to 'Pretend to Pat Your Pet' Challenge and It is Adorable

ಆನ್ಲೈನ್‌ನಲ್ಲಿ ನಾವು ಬಹಳಷ್ಟು ಬಾರಿ ಫನ್ನಿ ಹಾಗೂ ವಿಚಿತ್ರ ಚಾಲೆಂಜ್ ‌ಗಳನ್ನು ನೋಡುತ್ತಲೇ ಬರುತ್ತೇವೆ. ಇದೀಗ ಈ ಪಟ್ಟಿಗೆ “Pretend to pat your pet” ಎಂಬ ಹೊಸ ಸೇರ್ಪಡೆಯಾಗಿದೆ.

ಈ ಚಾಲೆಂಜ್‌ ಸ್ವೀಕರಿಸಿದ ವ್ಯಕ್ತಿ ತಮ್ಮ ಸಾಕು ಪ್ರಾಣಿಯ ತಲೆಯ ಬಳಿ ಕೈ ತೆಗೆದುಕೊಂಡು ಹೋಗಿ ಇನ್ನೇನು ಸವರುವಂತೆ ಮಾಡಬೇಕು ಆದರೆ ಸವರುವಂತಿಲ್ಲ. ಆಗ ಆ ಸಾಕು ಪ್ರಾಣಿಯ ಪ್ರತಿಕ್ರಿಯೆಯನ್ನು ವಿಡಿಯೋದಲ್ಲಿ ಸೆರೆ ಹಿಡಿದುಕೊಂಡು ಸಾಮಾಜಿಕ ಜಾತಲಾಣದಲ್ಲಿ ಶೇರ್‌ ಮಾಡುವುದು ಈ ಚಾಲೆಂಜ್‌ನ ಸಾರ.

ನಾಯಿ, ಬೆಕ್ಕು, ಪಕ್ಷಿಗಳ ಮೇಲೆಲ್ಲಾ ಅವುಗಳನ್ನು ಸಾಕಿದವರು ಹೀಗೆ ಮಾಡಿ, ಆ ಸನ್ನಿವೇಶಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಾಕು ಪಕ್ಷಿಯ ತಲೆಯ ಬಳಿ ಹಸ್ತವನ್ನು ತಂದು ಹಾಗೇ ನಿಲ್ಲಿಸಿದ್ದಾರೆ. ತನ್ನ ತಲೆನೇವರಿಸಬಹುದು ಎಂದುಕೊಂಡು ನೆಟ್ಟಗೆ ನಿಲ್ಲುವ ಆ ಪಕ್ಷಿಯು ಕೆಲ ಕ್ಷಣಗಳ ಬಳಿಕ ಖುದ್ದು ತನ್ನ ತಲೆಯನ್ನು ತನ್ನ ಸಾಕಿದವನ ಕೈ ಬಳಿಗೆ ತಂದು, ತಲೆ ಸವರುವಂತೆ ಪ್ರೇರೇಪಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...