alex Certify ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ…!

ಇಂಜೆಕ್ಷನ್​ ತೆಗೆದುಕೊಳ್ಳುವಾಗ ಭಯವಾಗೋದು ಸಾಮಾನ್ಯ. ಆದರೆ ಇಂಜೆಕ್ಷನ್​​ಗಿಂತ ಆಸ್ಪತ್ರೆಯಲ್ಲಿ ನಾವು ವರ್ತಿಸುವ ರೀತಿ ಇನ್ನೊಬ್ಬರಿಗೆ ಭಯವಾಗುವಂತಿದ್ದರೆ ಕಷ್ಟ. ಅಂದಹಾಗೆ ಈ ಮಾತನ್ನ ಹೇಳೋಕೆ ಕಾರಣಾನು ಇದೆ.

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ವಿಡಿಯೋದಲ್ಲಿ ಇಂಜೆಕ್ಷನ್​​ ಚುಚ್ಚಿಸಿಕೊಳ್ಳುವಾಗ ವ್ಯಕ್ತಿ ಭಯಪಟ್ಟ ರೀತಿ ನೋಡಿದ್ರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ.

ಪಿಪಿಇ ಕಿಟ್​ ಧರಿಸಿದ ಆರೋಗ್ಯ ಸಿಬ್ಬಂದಿ ಖುರ್ಚಿಯ ಮೇಲೆ ಕುಳಿತಿದ್ದ ವ್ಯಕ್ತಿಯ ತೋಳಿಗೆ ಇಂಜೆಕ್ಷನ್​ ಚುಚ್ಚಲು ಮುಂದಾಗುತ್ತಾರೆ. ಆದರೆ ಇಂಜೆಕ್ಷನ್​ ಚುಚ್ಚಿಸಿಕೊಳ್ಳಬೇಕಾಗಿದ್ದ ವ್ಯಕ್ತಿ ಅದೆಷ್ಟು ಭಯಗೊಂಡಿದ್ದ ಅಂದ್ರೆ ಆತ ಕುರ್ಚಿಯಿಂದಲೇ ಕೆಳಗೆ ಬೀಳುವಷ್ಟರ ಮಟ್ಟಿಗೆ ಹೋಗುತ್ತಾನೆ. ಅಲ್ಲೇ ಇದ್ದ ಇನ್ನೊಬ್ಬ ಸಿಬ್ಬಂದಿ ಆತನಿಗೆ ಧೈರ್ಯ ತುಂಬಲು ಯತ್ನಿಸುತ್ತಾರೆ.

ಬೇರೆ ಕಡೆ ನೋಡುವಂತೆ, ಕಣ್ಮುಚ್ಚಿಕೊಳ್ಳುವಂತೆ ಆತನಿಗೆ ಸಲಹೆಗಳನ್ನ ನೀಡಲಾಗುತ್ತೆ. ಕೊನೆಗೂ ಇಂಜೆಕ್ಷನ್​ ಕೊಡುವ ವೇಳೆ ಆತ ಜೋರಾಗಿ ಕಿರುಚಿಕೊಳ್ತಾನೆ. ಇದನ್ನೆಲ್ಲ ನೋಡ್ತಿದ್ರೆ ಆತ ಸೂಜಿಗೆ ಎಷ್ಟು ಹೆದರುತ್ತಾನೆ ಅನ್ನೋದು ಸ್ಪಷ್ಟವಾಗಿ ಗೋಚರವಾಗುತ್ತೆ. ಅಂದಹಾಗೆ ನಿಮಗೂ ಇಂಜೆಕ್ಷನ್​ ಅಂದರೆ ಇಷ್ಟೇ ಭಯಾನಾ..?

— Harsh Goenka (@hvgoenka) January 13, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...