alex Certify ಫ್ಯಾಕ್ಟ್​ ಚೆಕ್​ನಲ್ಲಿ ಬಯಲಾಯ್ತು ಚೆನ್ನೈ ವಿಡಿಯೋದ ಅಸಲಿ ಸತ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಯಾಕ್ಟ್​ ಚೆಕ್​ನಲ್ಲಿ ಬಯಲಾಯ್ತು ಚೆನ್ನೈ ವಿಡಿಯೋದ ಅಸಲಿ ಸತ್ಯ..!

ಭಾರತದ ದಕ್ಷಿಣ ಕರಾವಳಿಗೆ ಬಂದು ಅಪ್ಪಳಿಸಿರುವ ನಿವಾರ್​ ಚಂಡಮಾರುತ ಕನಿಷ್ಟ ಐದು ಮಂದಿಯನ್ನ ಬಲಿ ಪಡೆದಿದೆ. ಪುದುಚೇರಿಯಲ್ಲಿ ನಿವಾರ್​ ಚಂಡಮಾರುತದಿಂದಾಗಿ ಭೂಕುಸಿತ ಉಂಟಾಗಿದೆ. ಭಾರೀ ಮಳೆಗೆ ಮರಗಳು ಹಾಗೂ ವಿದ್ಯುತ್​ ಕಂಬಗಳು ಧರಾಶಾಹಿಯಾಗಿವೆ.‌

ನಿವಾರ್​ ಚಂಡಮಾರುತದಿಂದ ಉಂಟಾದ ಹಾನಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಒಂದು ವಿಡಿಯೋದಲ್ಲಂತು ಜನನಿಬಿಡದ ಪ್ರದೇಶದಲ್ಲಿ ಗಾಳಿ ಮಳೆಯ ರಭಸಕ್ಕೆ ಫ್ಲೆಕ್ಸ್ ಒಂದು ಧರಾಶಾಹಿಯಾಗಿದೆ.

ಇದು ಧರಾಶಾಹಿಯಾಗುವ ವೇಳೆ ಇಬ್ಬರು ಬೈಕ್​ ಸವಾರರಿಗೆ ಬಂದು ಬಡಿದಿದೆ. ಈ ವಿಡಿಯೋ ಚೆನ್ನೈನಲ್ಲಿ ನಡೆದ ಅವಘಡ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆದರೆ ಫ್ಯಾಕ್ಟ್​ ಚೆಕ್​ ವೇಳೆ ಈ ವಿಡಿಯೋ ಚೆನ್ನೈನದ್ದಲ್ಲ ಬದಲಾಗಿ ಪಾಕಿಸ್ತಾನದ ಹಳೆಯ ವಿಡಿಯೋ ಎಂಬ ಸತ್ಯ ಬಯಲಾಗಿದೆ. ಈ ವಿಡಿಯೋ ಆಗಸ್ಟ್​ನಲ್ಲಿ ಮೊದಲ ಬಾರಿಗೆ ಪೋಸ್ಟ್ ಮಾಡಲಾಗಿದೆ.

— Anil Kaushik?? (@anilkaushik_) November 25, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...