alex Certify ಶ್ವಾನಗಳಿಗೆಂದೇ ಆಯೋಜನೆಗೊಂಡಿದೆ ಸಂಗೀತ ಕಛೇರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನಗಳಿಗೆಂದೇ ಆಯೋಜನೆಗೊಂಡಿದೆ ಸಂಗೀತ ಕಛೇರಿ..!

ಕೊಲಂಬಿಯಾದಲ್ಲಿ ಕ್ರಿಸ್​ ಮಸ್​ ಹಾಗೂ ಹೊಸ ವರ್ಷದ ವಿಶೇಷವಾಗಿ ರಾಶಿ ರಾಶಿ ಪಟಾಕಿಯನ್ನ ಸಿಡಿಸೋದು ಸಂಪ್ರದಾಯವಾಗಿದೆ. ಆದರೆ ಕೊಲಂಬಿಯಾ ರಾಜಧಾನಿ ಬೊಗೋಟಾದಲ್ಲಿ ಫಿಲ್ಹಾರ್ಮೋನಿಕ್​ ಆರ್ಕೆಸ್ಟ್ರಾ ಸದಸ್ಯರು ಸಾಕು ಪ್ರಾಣಿಗಳಿಗಾಗಿ ಸಂಗೀತ ಕಚೇರಿ ನಡೆಸೋದ್ರ ಮೂಲಕ ವಿಶೇಷವಾಗಿ ಕ್ರಿಸ್​ಮಸ್​ ಹಬ್ಬವನ್ನ ಆಚರಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ವಿಡಿಯೋದಲ್ಲಿ ಮಾಲೀಕರ ಜೊತೆ ಕುಳಿತ ಶ್ವಾನಗಳು ಬ್ಯಾಂಡ್​ ಪ್ರದರ್ಶನ ಎಂಜಾಯ್​ ಮಾಡ್ತಿರೋದನ್ನ ನೋಡಬಹುದಾಗಿದೆ.

ಹಬ್ಬದ ಸಂಭ್ರಮದ ನೆಪದಲ್ಲಿ ಪ್ರಾಣಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೂ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಬೇಕು ಎಂಬುದನ್ನ ತೋರಿಸಲು ಫಿಲ್ಹಾರ್ಮೋನಿಕ್​ ಆರ್ಕೆಸ್ಟ್ರಾ ಸದಸ್ಯರು ಈ ಕಾರ್ಯಕ್ರಮ ಆಯೋಜಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...