alex Certify ಮನೆಯಲ್ಲೇ ಕಾರಿನ ಗಾಜನ್ನ ಟಿಂಟ್​ ಮಾಡೋದು ಹೇಗೆಂದು ಕಲಿಸಿಕೊಟ್ಟ ಟಿಕ್​ಟಾಕರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕಾರಿನ ಗಾಜನ್ನ ಟಿಂಟ್​ ಮಾಡೋದು ಹೇಗೆಂದು ಕಲಿಸಿಕೊಟ್ಟ ಟಿಕ್​ಟಾಕರ್​..!

ನಿಮ್ಮ ಕಾರಿಗೆ ಒಳ್ಳೆಯ ಟಿಂಟೆಡ್​ ಗಾಜನ್ನ ಅಳವಡಿಸೋಕೆ ನೀವು ಸಿದ್ಧರಿದ್ರೆ ಅದಕ್ಕೆ ತಕ್ಕಂತೆ ಹಣ ಖರ್ಚು ಮಾಡೋಕು ನೀವು ತಯಾರು ಇರಬೇಕು.

ಹಣ ಅರೆಂಜ್​ ಆದ ಬಳಿಕ ಸರಿಯಾಗಿ ಟಿಂಟೆಡ್​ ಗಾಜನ್ನ ಅಳವಡಿಸಿಕೊಡುವ ವರ್ಕ್​ಶಾಪ್​ನ್ನ ಹುಡುಕಬೇಕು. ಆದರೆ ಮನೆಯಲ್ಲೇ ಟಿಂಟೆಡ್​ ಗಾಜನ್ನ ಅದೂ 1 ಸಾವಿರ ರೂಪಾಯಿ ಒಳಗಿನ ಬಜೆಟ್​ನಲ್ಲಿ ಹಾಕೋಕೆ ಪ್ಲಾನ್​ ಇದೆ ಅಂದರೆ ನಂಬ್ತೀರಾ ನೀವು..?

ಟಿಕ್​ಟಾಕರ್​ ಒಬ್ಬ ಮೂರು ಗೃಹ ಬಳಕೆ ಸಾಮಗ್ರಿಯನ್ನ ಬಳಕೆ ಮಾಡಿ ತನ್ನ ಕಾರಿನ ಗಾಜುಗಳನ್ನ ಟಿಂಟೆಡ್​ ಆಗಿ ಬದಲಾವಣೆ ಮಾಡುವ ಮೂಲಕ ನೆಟ್ಟಿಗರ ಹುಬ್ಬೇರಿಸಿದ್ದಾನೆ.

ಇದ್ದಕ್ಕಾಗಿ ಈತ ಬಳಕೆ ಮಾಡಿದ್ದು ಒಂದು ಮ್ಯಾಪಲ್​ ಸಿರಪ್​, ಚಾರ್​ಕೋಲ್​ ಟೂತ್​ಪೇಸ್ಟ್ ಹಾಗೂ ಕ್ಲಿಂಗ್​ ಫಿಲಂ. ಇದೆಲ್ಲಕ್ಕಾಗಿ ಆತ ಖರ್ಚು ಮಾಡಿದ್ದು 100 ರೂಪಾಯಿಗಿಂತಲೂ ಕಡಿಮೆ ಹಣ.

ರಸೆಲ್​ ಬ್ರೌನ್​​ ಎಂಬ ವ್ಯಕ್ತಿ ತನ್ನ ಟಿಕ್​ಟಾಕ್​ ವಿಡಿಯೋದಲ್ಲಿ ಈ ಸುಲಭವಾದ ವಿಧಾನವನ್ನ ಹೇಳಿಕೊಟ್ಟಿದ್ದು ಈ ವಿಡಿಯೋ 46 ಮಿಲಿಯನ್​ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...