alex Certify ಕಾರಂಜಿಯೊಂದಿಗೆ ಚಿನ್ನಾಟವಾಡುತ್ತಿರೋ ಶ್ವಾನದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಂಜಿಯೊಂದಿಗೆ ಚಿನ್ನಾಟವಾಡುತ್ತಿರೋ ಶ್ವಾನದ ವಿಡಿಯೋ ವೈರಲ್

ಚಿಮ್ಮುವ ಕಾರಂಜಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ.‌ ಒಮ್ಮೆ ಹೋಗಿ ಅದರ ಜತೆ ಆಟವಾಡಿಬಿಡುವ ಎಂಬ ಆಸೆ ಎಲ್ಲರಿಗೂ ಆಗುತ್ತದೆ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಹಾಗೆ ಮಾಡಲು ಮುಜುಗರ.‌ ಯಾರಾದರೂ ಗದರಿಸಿದರೆ ಎಂಬ ಭಯವೂ ಇರುತ್ತದೆ.‌

ಆದರೆ, ಅದ್ಯಾವುದರ ಪರಿವೆಯೇ ಇಲ್ಲದ ನಾಯಿಯೊಂದು ಕಾರಂಜಿಯ ಜತೆ ಆಟವಾಡಿದ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಉದ್ಯಾನವೊಂದರಲ್ಲಿ ಸೆರೆ ಹಿಡಿದ ವಿಡಿಯೋ ಇದಾಗಿದ್ದು, ಸ್ಮಿತ್ ಎಂಬುವವರು ಅಪ್‌ಲೋಡ್ ಮಾಡಿದ್ದಾರೆ.

ನಾಯಿ ಕೊಳದ‌ ನಡುವೆ ಇರುವ ಕಾರಂಜಿಯ ಜತೆ ಜಿಗಿದು, ಮೈ ಕೊಟ್ಟು, ತನ್ನ ಜೀವನದ ಅತ್ಯಂತ ಖುಷಿಯ ದಿನ ಅನುಭವಿಸುತ್ತದೆ. ಅದರ ಯಜಮಾನ ಕರೆದರೂ ದಡಕ್ಕೆ ಬರುವುದಿಲ್ಲ. ನಂತರ ಆತ ಕೊಳದಲ್ಲಿ ಇಳಿದು ಹೋಗಿ ಕಾರಂಜಿ ಜತೆ ಆಡುತ್ತಿರುವ ನಾಯಿಯನ್ನು ಎಳೆದು ತರುವ 44 ಸೆಕೆಂಡ್‌ ಗಳ ವಿಡಿಯೋ ಇದಾಗಿದೆ. ವಿಡಿಯೋವನ್ನು 1.7 ಮಿಲಿಯನ್ ಜನ ವೀಕ್ಷಿಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...